ಬೆಂಗಳೂರು : ಯುವಕನೊಬ್ಬ ಯುವತಿಗೆ ಹಣ ಕೊಡುವಂತೆ ಹೆದರಿಸಿದ್ದು, ಒಂದು ವೇಳೆ ಕೊಡದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದ್ದಲ್ಲದೆ, ಆಸಿಡ್ ಹಾಕಿ ಯಾರು ಮದುವೆಯಾಗದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಯುವತಿಗೆ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದವನ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಹಣ ಕೊಡದಿದ್ದರೆ ಫೋಟೋ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಹೆದರಿಸಿರುವ ತಿರುಮಲ ಎಂಬ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ವಿಡಿಯೋ ಫೋಟೋ ವೈರಲ್ ಮಾಡುವುದಾಗಿ ಯುವಕ ಬೆದರಿಕೆ ಹಾಕಿದ್ದಾನೆ.
ಅಲ್ಲದೆ ಬೇರೆಯವರನ್ನು ಮದುವೆಯಾಗದಂತೆ ಆಸಿಡ್ ಹಾಕುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ್ದ ಯುವಕ ತಿರುಮಲ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಯುವತಿಯ ದೂರಿನ ಅನ್ವಯ ತಿರುಮಲ ವಿರುದ್ಧ ಸೆಕ್ಷನ್ 78 (¡¡) 79,351(3) ಬಿಎನ್ಎಸ್ 2023ರ ಅಡಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.