ಬೆಂಗಳೂರು : ಶುಲಕ ಕಾರಣಕ್ಕೆ ಸ್ನೇಹಿತರ ಮಧ್ಯ ಗಲಾಟೆ ನಡೆದಿದೆ. ನಂತರ ವ್ಯಕ್ತಿಯೊಬ್ಬ ಮಗನ ಜೊತೆ ಸೇರಿ ಸ್ನೇಹಿತನ ಎದೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಬೆಂಗಳೂರಿನ ಬಂಡೆಪಾಳ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ಗಾಯಗೋಳಿಸಿರುವ ಘಟನೆ ನಡೆದಿದೆ. ಮಂಜು ಅಲಿಯಾಸ್ ಜೋಕರ್ ಮಂಜು ಆತನ ಮಗನಿಂದ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನ ನರಸಿಂಹ ಎಂದು ತಿಳಿದುಬಂದಿದೆ.ಮುನಿರಾಜು ಎಂಬ ಸ್ನೇಹಿತರ ಮನೆಯಲ್ಲಿ ಪಾರ್ಟಿಯ ವೇಳೆ ಕಿರಿಕ್ ಆಗಿದೆ.
ನರಸಿಂಹ ಮತ್ತು ಜೋಕರ್ ಮಂಜು ನಡುವೆ ಈ ಒಂದು ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಗಲಾಟೆ ಬಳಿಕ ಸ್ನೇಹಿತ ಮುನಿರಾಜು ನಿವಾಸದಿಂದ ನರಸಿಂಹ ತೆರಳಿದ್ದ. ಈ ವೇಳೆ ಫೋನ್ ಮಾಡಿ ಮಗಾ ದೀಪಕ್ ನನ್ನು ಜೋಕರ್ ಮಂಜ ಕರೆಸಿಕೊಂಡಿದ್ದ.ಬಂಡಿಪಾಳ್ಯ ಠಾಣೆ ಸಮೀಪದ ಖಾಲಿ ಜಾಗದಲ್ಲಿ ನರಸಿಂಹ ಕುಳಿತಿದ್ದ ಜೋಕರ್ ಮಂಜ ಮತ್ತು ಆತನ ಮಗನಿಂದ ನರಸಿಂಹ ಜೋತೆ ಮತ್ತೆ ಗಲಾಟೆ ನಡೆದಿದೆ.
ಚಾಕುವಿನಿಂದ ನರಸಿಂಹನ ಎದೆಯ ಭಾಗಕ್ಕೆ ಇರಿದು ಇಬ್ಬರು ಹಲ್ಲೆ ನಡೆಸಿದ್ದಾರೆ.ಜೋರಾಗಿ ಕಿರುಚಿಕೊಂಡು ನರಸಿಂಹ ಪೊಲೀಸ್ ಠಾಣೆಗೆ ಓಡಿ ಬಂದಿದ್ದಾನೆ ನರಸಿಂಹನನ್ನು ತಕ್ಷಣ ಪೊಲೀಸರು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಇದೀಗ ನರಸಿಂಹ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದಾನೆ ಬಂಡಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.