ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ತಾಯಿಯ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿಯನ್ನು ಕೊಂದು ಶವವನ್ನು ಬ್ಯಾಗಿನಲ್ಲಿ ಹಾಕಿ ಚರಂಡಿಗೆ ಎಸೆದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಬಾಲಕಿಯ ರೇಪ್ & ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಬಾಲಕಿ ರೇಪ್ & ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಬೆಚ್ಚಿ ಬೀಳಿಸೋ ಕ್ರೌರ್ಯ ಬಯಲಾಗಿದೆ. 6 ವರ್ಷದ ಕಂದಮ್ಮನ ಮೇಲೆ ದುಷ್ಕರ್ಮಿ ಮೃಗದ ರೀತಿ ಕ್ರೌರ್ಯ ನಡೆಸಿದ್ದಾನೆ. ಕಂದಮ್ಮನ ಮೇಲೆ ಯೂಸುಫ್ ಅತ್ಯಾಚಾರ ಎಸಗಿದ್ದಾನೆ. ತನಿಖೆ ವೇಳೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಪತ್ತೆಯಾಗಿದೆ.
ಘಟನೆ ಹಿನ್ನೆಲೆ
ಕೊಲ್ಕತ್ತಾ ಮೂಲದ ಬಾಲಕಿಯನ್ನು ಕತ್ತುಹಿಸಿ ಕೊಲೆ ಮಾಡಲಾಗಿದೆ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಬ್ಯಾಗಿನಲ್ಲಿ ಶವ ಹಾಕಿ ದುಷ್ಕರ್ಮಿ ಯೂಸುಫ್ ಪರಾರಿಯಾಗಿದ್ದ. ಅಲ್ಲದೆ ಶವವನ್ನು ಚರಂಡಿಗೆ ಎಸೆದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾನೆ. ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








