ಬೆಂಗಳೂರು : ಪ್ಲಾಸ್ಟಿಕ್ ಸಂಗ್ರಹಣ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇವರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನೊಬ್ಬ ಎಂಬಲ್ಲಿ ನಡೆದಿದೆ.
BREAKING : ಯಾದಗಿರಿಯಲ್ಲಿ `ನೈತಿಕ ಪೊಲೀಸ್ ಗಿರಿ’ : ಅನ್ಯಕೋಮಿನ ಯುವತಿ ಪ್ರೀತಿಸಿದ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ
ಬೆಂಗಳೂರು ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನೊಬ್ಬ ಬಳಿ 5 ಬಾಲಕಾರ್ಮಿಕರನ್ನು ರಕ್ಷಣೆಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡ ಘಟ್ಟಿಗನೊಬ್ಬಲ್ಲಿ ಈ ಐವರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ. ಪ್ಲಾಸ್ಟಿಕ್ ಸಂಗ್ರಹಣ ಘಟಕದಲ್ಲಿ 5 ಬಾಲಕಾರ್ಮಿಕರು ಕೆಲಸಕ್ಕೆ ಇದ್ದರು ಎಂದು ತಿಳಿದುಬಂದಿದೆ.
ಘಟಕದಲ್ಲಿ ಮಾಲೀಕ ಅಕ್ರಮವಾಗಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಎಂದು ಆರೋಪಿಸಲಾಗುತ್ತಿದೆ. ಸಾರ್ವಜನಿಕ ದೂರು ಆಧರಿಸಿ ದಾಳಿ ನಡೆಸಿದಾಗ ಇದೀಗ ಐವರು ಮಕ್ಕಳು ಪತ್ತೆಯಾಗಿದ್ದು, ಈ ಐವರು ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಅಧಿಕಾರಿಗಳು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.ಇದೀಗ ಪ್ಲಾಸ್ಟಿಕ್ ಸಂಗ್ರಹಣಾ ಘಟಕದ ವಿರುದ್ಧ ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಹೊಸಕೋಟೆ ಠಾಣೆ ಪೋಲಿಸರಿಂದ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.