ಬೆಂಗಳೂರು : ಬೆಂಗಳೂರಿನ ಸಿಗ್ನಲ್ಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಗೆ ತಳ್ಳಿದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಒಟ್ಟು 47 ಮಕ್ಕಳನ್ನು ರಕ್ಷಿಸಿದ್ದು ಘಟನೆಗೆ ಸಂಬಂಧಿಸಿದಂತೆ 37 ಪೋಷಕರನ್ನು ಸಿಸಿಬಿ ಅಧಿಕಾರಿಗಳು ವರ್ಷಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ವಾಟ್ಸಾಪ್ ಬಳಕೆದಾರರಿಗೂ ಈಗ ‘ಮೆಟಾ AI’ ಲಭ್ಯ ; ಗುರುತಿಸುವುದು ಹೇಗೆ ಗೊತ್ತಾ.?
ಕಾರ್ಯಾಚರಣೆಯಲ್ಲಿ 47 ಮಕ್ಕಳನ್ನು ರಕ್ಷಿಸಲಾಗಿದ್ದು, ಸದ್ಯ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಒಪ್ಪಿಸಲಾಗಿದೆ. ಬಿಕ್ಷಾಟನೆಗೆ ತೊಡಗಿಸಿಕೊಂಡಿದ್ದ ಮಕ್ಕಳು ನಿಜವಾಗಲು ಪೋಷಕರ ಮಕ್ಕಳೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ.
BREAKING : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ :ಫರ್ನಿಚರ್, ಗುಜರಿ ಅಂಗಡಿ ಸೇರಿ 4 ಅಂಗಡಿಗಳು ಭಸ್ಮ
ನಗರದ ಕೆ.ಜಿ.ಹಳ್ಳಿ ಹಾಗೂ ಫ್ರೇಜರ್ ಟೌನ್ ಸುತ್ತಮುತ್ತಲಿನ ಸಿಗ್ನಲ್ಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಬಿಕ್ಷಾಟನೆ ನಡೆಸಲಾಗುತಿತ್ತು. ಈ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಮಕ್ಕಳನ್ನ ಭಿಕ್ಷಾಟನೆಗೆ ಬಳಸುತ್ತಿದ್ದ 37 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಮಾನವ ಕಳ್ಳಸಾಗಾಣಿಕೆ ಮೂಲಕ ಮಕ್ಕಳನ್ನು ನಗರಕ್ಕೆ ಕರೆತರಲಾಗಿದೆಯೇ ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.