ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡ್ರಗ್ಸ್ ಮಾರಾಟ ಮಾಡಲು ಸಂಚು ರೂಪಿಸಿದ್ದ, ಇಬ್ಬರು ದಂಪತಿಗಳು ಸೇರಿದಂತೆ ಒಟ್ಟು ಮೂವರನ್ನು ಬೆಂಗಳೂರಿನ ಗೋವಿಂದಪುರ ಠಾಣೆಯ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 3.25 ಕೋಟಿ ಮೌಲ್ಯದ 318 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಗೋವಿಂದಪುರ ಠಾಣೆಯ ಪೊಲೀಸರಿಂದ ಮೂವರು ಆರೋಪಿಗಳ ಜಮೀರ್ ಮತ್ತು ರೇಷ್ಮಾ ದಂಪತಿ ಹಾಗೂ ಕೇರಳ ಮೂಲದ ಇನ್ನೊಬ ಆರೋಪಿ ಸೇರಿ ಮೂವರ ಬಂಧನವಾಗಿದೆ. ನ್ಯೂ ಇಯರ್ ಗೆ ಬೆಂಗಳೂರು ಮತ್ತು ಕೇರಳದಲ್ಲಿ ಡ್ರಗ್ಸ್ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಕಾರಿನಲ್ಲಿ ಗಾಂಜಾ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಎಚ್ ಬಿ ಆರ್ ಲೇಔಟ್ ಬಳಿ ಕಾರಿನ ಮೇಲೆ ಗೋವಿಂದಪುರ ಪೊಲೀಸರು ದಾಳಿ ಮಾಡಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ಸುಮಾರು 3.25 ಕೋಟಿ ರೂಪಾಯಿ ಮೌಲ್ಯದ 318 ಕೆಜಿ ಗಾಂಜಾ ಪತ್ತೆಯಾಗಿದೆ. ಒಡಿಶಾದಿಂದ ಬೆಂಗಳೂರಿಗೆ 3 ಆರೋಪಿಗಳು ಗಾಂಜಾ ಸಾಗಿಸುತ್ತಿದ್ದರು. ಒಡಿಸ್ಸಾ ಆಂಧ್ರಪ್ರದೇಶದಲ್ಲಿ ಕ್ವಿಂಟಾಲ್ ಗಟ್ಟಲೆ ಮೂವರು ಗಾಂಜಾ ಸಂಗ್ರಹಿಸಿದ್ದರು. ಗಾಂಜಾವನ್ನು ಬೆಡ್ ಶೀಟ್ ನಲ್ಲಿ ತುಂಬಿ ಬೆಂಗಳೂರಿಗೆ ಸಾಗಿಸುತ್ತಿದ್ದರು. ಹೊಸ ವರ್ಷ ಆಚರಣೆಯ ವೇಳೆ ಬೆಂಗಳೂರು ಕೇರಳದಲ್ಲಿ ಮಾರಾಟಕ್ಕೆ ಮೂರು ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಜಮೀರ್ ಮತ್ತು ದಂಪತಿ ಬೆಂಗಳೂರಿನಲ್ಲಿ ಗಾಂಜಾ ಮಾರಲು ಸಂಚು ರೂಪಿಸಿದ್ದರು. ಕೇರಳದಲ್ಲಿ ಗಾಂಜಾ ಮಾಡಲು ಡ್ರಗ್ ಪೆಡ್ಲರ್ ಅಚ್ಚು ಸಜ್ಜಾಗಿದ್ದ, ಈ ಕುರಿತಂತೆ ಕೇರಳ ಪೊಲೀಸರಿಂದ ಮಾಹಿತಿ ಒದಗಿ ಬಂದಿದೆ. ಹಾಗಾಗಿ ಇದೀಗ ಜಮೀರ್ ದಂಪತಿ ಸೇರಿದಂತೆ ಅಚ್ಚುವನ್ನು ಕೂಡ ಇದೀಗ ಗೋವಿಂದಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದು, ಅವರ ಬಳಿದ ಕೋಟ್ಯಾಂತರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ವಿದೇಶಿ ಪೆಡ್ಲರ್ ಗಳ ಬಂಧನ
ಬೆಂಗಳೂರಿನಲ್ಲಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನವಾಗಿದ್ದು, ಬಂಧಿತರ ಬಳಿ ಇದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಸೋಲದೇವನಹಳ್ಳಿ ಬಳಿ ಆರೋಪಿಗಳು ಡ್ರಗ್ ಸಂಗ್ರಹಿಸಿದ್ದರು. ಬಂಧಿತರಿಂದ ಒಂದು ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್ 202 ಗ್ರಾಂ ಕೊಕೆನ್ ಗ್ರಾಂ ಎಂಡಿಎಂಎ ಎಕ್ಸಟ್ಸಿ ಜಪ್ತಿ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನ್ಯೂ ಇಯರ್ ಗೆ ಡ್ರಗ್ಸ್ ಮಾಡಲು ಸಜ್ಜಾಗಿದ್ದರು ಎನ್ನಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ ವೈದ್ಯಕೀಯ ವೀಸಾದ ಅಡಿ ಭಾರತಕ್ಕೆ ಡ್ರಗ್ ಪೆಡಲ್ ಗಳು ಬಂದಿದ್ದರು.ಈ ಹಿಂದೆ ಮುಂಬೈ ಹೈದರಾಬಾದ್ ನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.