ಬೆಂಗಳೂರು: ನಗರದ ಮೈಕೋ ಲೇಔಟ್ ಪೊಲೀಸರು ಮೊಬೈಲ್ ಸುಲಿಗೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 8.50 ಲಕ್ಷ ಮೌಲ್ಯ 35 ಮೊಬೈಲ್ ಪೋನ್ ಗಳನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸ್ ಮಾಹಿತಿ ನೀಡಿದ್ದು, ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 28-12-2022ರಂದು ವ್ಯಕ್ತಿಯೊಬ್ಬರು ಊರಿನಿಂದ ಬಂದು, ಕ್ಯಾಬ್ ಗಾಗಿ ಕಾಯುತ್ತಿದ್ದರು. ಈ ವೇಳೆ ಹಿಂಬದಿಯಾಗಿ ಬೈಕ್ ನಲ್ಲಿ ಬಂದಂತ ಇಬ್ಬರು, ಅವರ ಐಪೋನ್-11 ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಸುಜಿತ್ ಎಸ್ ಎಂಬುವರು ದೂರು ನೀಡಿದ ಹಿನ್ನಲೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು ಎಂದಿದೆ.
ಐಪೋನ್-11 ಪ್ರಕರಣದ ಬೆನ್ನತ್ತಿದಂತ ಪೊಲೀಸರು, 90 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಬಳಿಕ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 8,50,000 ರೂ ಬೆಲೆ ಬಾಳುವ ವಿವಿಧ ಕಂಪನಿಯ 35 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಪ್ರಕರಣವನ್ನು ಆಗ್ನೇಯ ವಿಭಾಗದ ಡೆಪ್ಯೂಟಿ ಪೊಲೀಸ್ ಕಮೀಷನ್ ಸಿ.ಕೆ ಬಾಬು ಮಾರ್ಗದರ್ಶನದಲ್ಲಿ ನಡೆಸಲಾಯಿತು. ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಠಾಣೆಯ ಹೆಡ್ ಕಾನ್ಸ್ ಟೇಬಲ್ ರಾಮಚಂದ್ರ, ಜಗದೀಶ್ ಪಾಟೀಲ್, ತುಳಸಿ, ಪಿಸಿ ಮಧು, ಸಂಜಿತ್, ಮಂಜುನಾಥ ಧಾರವಾಡ, ಅಶೋಕ ತಳಗೇರಿ, ಶ್ರೀಕೃಷ್ಣ ಮತ್ತು ಗಂಗೂಬಾಯಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದೆ.
ವರದಿ: ವಸಂತ ಬಿ ಈಶ್ವರಗೆರೆ
BREAKING NEWS : ‘BCCI ಆಯ್ಕೆ ಸಮಿತಿ’ಯ ಅಧ್ಯಕ್ಷರಾಗಿ ‘ಚೇತನ್ ಶರ್ಮಾ’ ಪುನರಾಯ್ಕೆ |Chetan Sharma
Crime News: ಬೆಂಗಳೂರಿನಲ್ಲಿ ನಾಲ್ವರು ಕಳ್ಳರ ಗ್ಯಾಂಗ್ ಬಂಧನ: ಸಿಕ್ಕಿದ್ದೇಗೆ ಗೊತ್ತಾ? ಈ ಸುದ್ದಿ ಓದಿ