ಬೆಂಗಳೂರು : ಮೆಟ್ರೋ ಸೇವೆ ಆರಂಭ ಅದಾಗಿನಿಂದ ಬೆಂಗಳೂರಿನ ಜನತೆಗೆ ಸಾಕಷ್ಟು ಅನುಕೂಲ ಆಗಿದೆ ಎಂಬುದಕ್ಕೆ ಇದೆ ಉದಾಹರಣೆಯಾಗಿದೆ.ಬೆಂಗಳೂರು ಮೆಟ್ರೋ ನಿಗಮ ಕಳೆದ ಡಿಸೆಂಬರ್ನಲ್ಲಿ ಒಟ್ಟಾರೆ ನೂರು ಕೋಟಿ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದ ಮೈಲುಗಲ್ಲು ಸ್ಥಾಪಿಸಿದೆ. ಸದ್ಯ ಪ್ರತಿದಿನ 7 ಲಕ್ಷ ಸರಾಸರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
2011ರ ಅ.20ರಿಂದ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸಿದ್ದು, ಕಳೆದ ಡಿ.29ರಂದು ನೂರು ಕೋಟಿ ಪ್ರಯಾಣಿಕರ ಸಂಖ್ಯೆಯನ್ನು ದಾಟಿದೆ. ಜನವರಿಯಲ್ಲಿ ಈವರೆಗೆ ಸರಿಸುಮಾರು 1.40 ಕೋಟಿಗೂ ಪ್ರಯಾಣಿಕರು ಸಂಚಾರ
ಮಾಡಿದ್ದಾರೆ.ಡಿಸೆಂಬರ್ನಲ್ಲಿ ಒಟ್ಟು 1.73 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಡಿ.13ರಂದು ಗರಿಷ್ಠ 7.48ಲಕ್ಷ ಪ್ರಯಾಣಿ ಕರು ಸಂಚಾರ ಮಾಡಿದ್ದರು.
ಇದರಲ್ಲಿ ಶೇ. 51ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್, ಶೇ.31ರಷ್ಟು ಟೋಕನ್ ಬಳಕೆದಾರರು ಸೇರಿದ್ದಾರೆ. ಜೊತೆಗೆ ಶೇ. 14ರಷ್ಟು ಕ್ಯೂ ಆರ್ ಟಿಕೆಟ್ ಬಳಕೆದಾರರಿದ್ದಾರೆ.2023ರ ಜನವರಿಯಲ್ಲಿ 5.11 ಲಕ್ಷವಿದ್ದ ಕ್ಯೂ ಆರ್ ಟಿಕೆಟ್ ಬಳಕೆದಾರರ ಸಂಖ್ಯೆ ಡಿಸೆಂಬರ್ಗೆ 25.9 ಲಕ್ಷ ದಾಟಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ.