ಬೆಂಗಳೂರು : ಪ್ರವಾಹದಿಂದ ತತ್ತರಿಸಿರುವ ರಾಜ್ಯ ರಾಜಧಾನಿ ಬೆಂಗಳೂರಿನ ನಿವಾಸಿಗಳು ಈಗ ಸುರಕ್ಷಿತ ಕುಡಿಯುವ ನೀರನ್ನ ಪಡೆಯಲು ಹೆಣಗಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪಂಪಿಂಗ್ ಸ್ಟೇಷನ್ ಜಲಾವೃತಗೊಂಡಿರುವುದರಿಂದ ನಗರದಲ್ಲಿ ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು.
50ಕ್ಕೂ ಹೆಚ್ಚು ಪ್ರದೇಶಗಳಿಗೆ ಕುಡಿಯುವ ನೀರಿನ ಲಭ್ಯತೆ ಇರುವುದಿಲ್ಲ ಎಂದು ವರದಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಪಿಂಗ್ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ.
ಯಶವಂತಪುರ, ಮಲ್ಲೇಶ್ವರಂ, ಓಕಳಿಪುರ, ಸಂಜಯನಗರ, ಸದಾಶಿವನಗರ, ಆರ್.ಟಿ ನಗರ, ಜೆಕೆವಿಕೆ, ಚಿಕ್ಕಪೇಟೆ, ಮೆಜೆಸ್ಟಿಕ್ ಶಿವಾಜಿನಗರ, ಫ್ರೆಜರ್ ಟೌನ್, ಡಿ.ಜೆ ಹಳ್ಳಿ, ಕೋಲ್ಸ್ ಪಾರ್ಕ್, ಟ್ಯಾನರಿ ರೋಡ್, ಮಲ್ಲಸಂದ್ರ, ಬಗಲಗುಂಟೆ, ದಾಸರಹಳ್ಳಿ, ನಂದಿನಿ ಲೇಔಟ್, ಆರ್ ಆರ್ ನಗರ, ಕೇಂಗೇರಿ, ಮಹದೇವಪುರ, ಹೆಚ್ಎಸ್ಆರ್ ಲೇಔಟ್, ಇಂದಿರಾನಗರ, ಹಲಸೂರು, ವಸಂತನಗರ, ಮಲ್ಲೇಶ್ವರಂ ಮತ್ತು ಇನ್ನೂ ಹೆಚ್ಚಿನ ಪ್ರದೇಶಗಳು ನೀರು ಸರಬರಜು ಆಗೋದಿಲ್ಲ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾನುವಾರ 28.1 ಮಿ.ಮೀ ಮಳೆಯಾಗಿದ್ದು, ಇದು ಸರಾಸರಿಗಿಂತ ಶೇ.368 ರಷ್ಟು ಹೆಚ್ಚಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಂಗ್ರಹಿಸಿದ ದತ್ತಾಂಶಗಳು ತಿಳಿಸಿವೆ.
ಜೂನ್ 1 ರಂದು ಮಾನ್ಸೂನ್ ಋತುವಿನ ಪ್ರಾರಂಭದಿಂದ ನಗರದಲ್ಲಿ ಸರಾಸರಿಗಿಂತ 141% ಹೆಚ್ಚು ಮಳೆಯಾಗಿದೆ.