ನವದೆಹಲಿ : ಪಶ್ಚಿಮ ಬಂಗಾಳದ “ಒಂದು ರೂಪಾಯಿ-ವೈದ್ಯ” ಖ್ಯಾತಿಯ ಬಿರ್ಭುಮ್ ಸುಶೋವನ್ ಬಂಡೋಪಾಧ್ಯಾಯ ಅವರ ವಿಧಿವಶರಾಗಿದ್ದು, ಅವ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಮಂಗಳವಾರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನಲ್ಲಿ, “ಡಾ. ಸುಶೋವನ್ ಬಂಡೋಪಾಧ್ಯಾಯ ಅವರು ಮಾನವ ಚೈತನ್ಯದ ಅತ್ಯುತ್ತಮತೆಯನ್ನ ಪ್ರತಿಬಿಂಬಿಸಿದ್ದಾರೆ. ಅನೇಕ ಜನರನ್ನ ಗುಣಪಡಿಸಿದ ದಯಾಪರ ಮತ್ತು ವಿಶಾಲ ಹೃದಯದ ವ್ಯಕ್ತಿಯಾಗಿ ಅವ್ರನ್ನ ನೆನಪಿಸಿಕೊಳ್ಳಲಾಗುವುದು. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರೊಂದಿಗೆ ನಾನು ನಡೆಸಿದ ಸಂವಾದ ನೆನಪಿಸಿಕೊಳ್ಳುತ್ತಿದ್ದೇನೆ. ಇನ್ನು ಅವ್ರ ನಿಧನದಿಂದ ದುಃಖಿತನಾಗಿದ್ದು, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದಿದ್ದಾರೆ.
Dr. Sushovan Bandyopadhyay epitomised the best of human spirit. He will be remembered as a kind and large hearted person who cured many people. I recall my interaction with him at the Padma Awards ceremony. Pained by his demise. Condolences to his family and admirers. Om Shanti. pic.twitter.com/Ms73RrYdfa
— Narendra Modi (@narendramodi) July 26, 2022
“ಏಕ್ ತಕಾರ್ ದಕ್ತಾರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಸುಶೋವನ್, ಬಿರ್ಭುಮ್ನ ಬೋಲ್ಪುರದಲ್ಲಿ ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. ಸುಶೋವನ್ ಒಮ್ಮೆ ಬೋಲ್ಪುರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. ಇನ್ನು ತೃಣಮೂಲ ಕಾಂಗ್ರೆಸ್ ರಚನೆಯಾದ ನಂತರ, ಅವರು ಬಿರ್ಭೂಮ್ನಲ್ಲಿ ತೃಣಮೂಲದ ಮೊದಲ ಜಿಲ್ಲಾ ಅಧ್ಯಕ್ಷರಾಗಿದ್ರು.
ಡಾ. ಸುಶೋವನ್ ಅವ್ರಿಗೆ 2020ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನ ನೀಡಿ ಗೌರವಿಸಲಾಯಿತು ಮತ್ತು ಅದೇ ವರ್ಷದಲ್ಲಿ, ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಅವರ ಹೆಸರು ದಾಖಲಾಯ್ತು.