ಕೋಲ್ಕತ್ತಾ: ಬಂಗಾಳಿ ನಟ ಸೈಬಲ್ ಭಟ್ಟಾಚಾರ್ಯ(Saibal Bhattacharya) ಅವರು ಪಶ್ಚಿಮ ಬಂಗಾಳದ ಕಸ್ಬಾದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ತಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಭಟ್ಟಾಚಾರ್ಯ ಅವರು ಅಮಲೇರಿದ ಸ್ಥಿತಿಯಲ್ಲಿದ್ದರು ಹಾಗೂ ಗಾಯಗೊಂಡಿದ್ದರು. ಅವರನ್ನು ತಕ್ಷಣ ಚಿತ್ತರಂಜನ್ ಆಸ್ಪತ್ರೆಗೆ ಸಾಗಿಸಲಾಯಿತು.

ಆತ್ಮಹತ್ಯೆಗೆ ಯತ್ನಿಸುವ ಮೊದಲು, ಭಟ್ಟಾಚಾರ್ಯ ಫೇಸ್‌ಬುಕ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದ್ರೆ, ಇದೀಗ ಅದನ್ನು ಡಿಲೀಟ್‌ ಮಾಡಲಾಗಿದೆ. ವಿಡಿಯೋದಲ್ಲಿ ಭಟ್ಟಾಚಾರ್ಯ ಅವರು ತಮ್ಮ ಹೆಂಡತಿ ಮತ್ತು ಅತ್ತೆಯನ್ನು ದೂಷಿಸಿದ್ದಾರೆ ಎನ್ನಲಾಗಿದೆ.

ಬೆಂಗಾಲಿ ನಟರಾದ ಪಲ್ಲವಿ ಡೇ ಮತ್ತು ಬಿದಿಶಾ ಡಿ ಮಜುಂದಾರ್ ಮತ್ತು ರೂಪದರ್ಶಿ-ನಟಿ ಮಂಜುಷಾ ನಿಯೋಗಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಕೆಲ ತಿಂಗಳುಗಳ ನಂತರ ಭಟ್ಟಾಚಾರ್ಯ ಅವರು ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಬಂದಿದೆ.

BIG NEWS: ಇಂದು ಬಿಹಾರದಲ್ಲಿ ‘ಮಹಾಘಟಬಂಧನ್-2’ ಅಸ್ಥಿತ್ವಕ್ಕೆ: ನಿತೀಶ್ ಕುಮಾರ್ ಸಿಎಂ, ತೇಜಸ್ವಿಯಾದವ್ ಡಿಸಿಎಂ ಆಗಿ ಪ್ರಮಾಣವಚನ | Bihar Political Crisis

Viral : ನೆಲಕ್ಕುರುಳಿದ 200 ವರ್ಷಗಳಷ್ಟು ಹಳೆಯ ಅರಳಿ ಮರ.. ಗಿಡದ ಬುಡ ಕಂಡ ಗ್ರಾಮಸ್ಥರಿಗೆ ಬಿಗ್‌ ಶಾಕ್ ; ಕಾರಣವೇನು ಗೊತ್ತಾ?

ಶಿವಮೊಗ್ಗ: ಭಾರೀ ಮಳೆಗೆ ಮನೆ ಗೋಡೆ ಕುಸಿತ, ನಾಲ್ವರಿಗೆ ಗಾಯ

Share.
Exit mobile version