ಪಟ್ನಾ: ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಮುರಿದು ಬಿದ್ದಿದೆ. ಈ ಬಳಿಕ ಮತ್ತೆ ಮಹಾಘಟಬಂಧನ್-2 ಸರ್ಕಾರ ರಚನೆಗೆ ಕ್ಷಣಗಣನೆ ಆರಂಭಗೊಂಡಿದೆ. ಬಿಜೆಪಿಗೆ 9 ವರ್ಷದಲ್ಲಿ 2 ಬಾರಿ ಶಾಕ್ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್ ಡಿಎ ಮೈತ್ರಿಕೂಟದಿಂದ ಹೊರಬಂದು, ಆರ್ ಜೆಡಿ ಜೊತೆಗೆ ಈಗ ಮಹಾಘಟಬಂಧನ್-2ಗೆ ರೆಡಿಯಾಗಿದ್ದಾರೆ. ಇಂದು ನೂತನ ಸರ್ಕಾರ ಬಿಹಾರದಲ್ಲಿ ಅಸ್ಥಿತ್ವಕ್ಕೆ ಬರಲಿದ್ದು, ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿಯಾಗಿ ತೇಜಸ್ವಿಯಾದವ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Job Alert: ‘ಶಿಕ್ಷಕರ ಹುದ್ದೆ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಈ ತಿಂಗಳ ಅಂತ್ಯಕ್ಕೆ ’15 ಸಾವಿರ ಶಿಕ್ಷಕರ ನೇಮಕಾತಿ’ ಫಲಿತಾಂಶ ಪ್ರಕಟ, ಅಕ್ಟೋಬರ್ ನಲ್ಲಿ ಆಯ್ಕೆ ಪಟ್ಟಿ ಬಿಡುಗಡೆ

ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕುಮಂಡಿಸೋ ಸಂಬಂಧ ಚರ್ಚೆ ನಡೆಸಿರುವಂತ ಅವರು, ಇಂದು ಮಧ್ಯಾಹ್ನ 2 ಗಂಟೆಗೆ ರಾಜಭವನದಲ್ಲಿ ನಡೆಯಲಿರುವಂತ ಸರಳ ಸಮಾರಂಭದಲ್ಲಿ ಜೆಡಿಯು ಹಾಗೂ ಆರ್ ಜೆಡಿ ಮೈತ್ರಿ ಕೂಟದ ಮಹಾಘಟಬಂಧನ್ ಸರ್ಕಾರ ರಚನೆಯಾಗಲಿದೆ. ನಿರೀಕ್ಷೆಯಂತೆ ನೂತನ ಸಿಎಂ ಆಗಿ ನಿತೀಶ್ ಕುಮಾರ್, ಡಿಸಿಎಂ ಆಗಿ ಲಾಲೂ ಪುತ್ರ ತೇಜಸ್ವಿಯಾದವ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನ್ಯಾಯಾಲಯದ ನಿಲುವು ತಪ್ಪಾಗದ ಹೊರತು ‘ಖುಲಾಸೆ ತೀರ್ಪಿ’ನಲ್ಲಿ ಹಸ್ತಕ್ಷೇಪ ಸರಿಯಲ್ಲ ; ಸುಪ್ರೀಂಕೋರ್ಟ್

ಅಂದಹಾಗೇ 2020ರ ವಿಧಆನಸಭೆ ಚುನಾವಣೆ ಬಳಿಕ ಸಿಎಂ ಆಗಿ ಪ್ರಮಾಣಪಚನ ಸ್ವೀಕರಿಸಿದ್ದ ನಿತೀಶ್ ಕುಮಾರ್ 2 ವರ್ಷದಲ್ಲೇ 2 ಬಾರಿ ಸಿಎಂ ಆಗಿ ಪದಗ್ರಹಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಇದುವರೆಗೆ 8 ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಂತವರಾಗಿ ಗಮನ ಸೆಳೆಯಲಿದ್ದಾರೆ.

Share.
Exit mobile version