ಪಶ್ಚಿಮ ಬಂಗಾಳ : ಐಸಿಸ್ನೊಂದಿಗೆ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ ಕೋಲ್ಕತಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಶುಕ್ರವಾರ ಪಶ್ಚಿಮ ಬಂಗಾಳದ ಹೌರಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ.
ಬಂಧನಕ್ಕೊಳಗಾದವರನ್ನು ಸಡಮ್ ಮತ್ತು ಸಯೀದ್ ಎಂದು ಗುರುತಿಸಲಾಗಿದೆ. ಜನವರಿ 19 ರವರೆಗೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
Two persons – Md. Saddam and Sayeed Ahmed – have been arrested from the eastern slope of Vidyasagar Sethu, Kolkata for recruiting young Muslim youths and collecting arms ammunition and explosives and to raise funds for terror: West Bengal STF pic.twitter.com/lSRuHQA3Bb
— ANI (@ANI) January 7, 2023
ಶುಕ್ರವಾರ ರಾತ್ರಿ, ಎಸ್ಟಿಎಫ್ ಘಟಕವು ಹೌರಾ ಪ್ರದೇಶದ ಮೇಲೆ ದಾಳಿ ನಡೆಸಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆರೋಪದ ಮೇಲೆ ಸಯೀದ್ ಅವರನ್ನು ಬಂಧಿಸಿತ್ತು. ಪೊಲೀಸರಿಗೆ ಹೇಳಿಕೆ ನೀಡಿದ ನಂತರ ಸದಮ್ ಎಂಬುವವನನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.
ಶನಿವಾರ, ಇಬ್ಬರನ್ನು ಕೋಲ್ಕತ್ತಾದ ಬ್ಯಾಂಕ್ಶಾಲ್ ನ್ಯಾಯಾಲಯದ ಮುಂದೆ ಕರೆತರಲಾಗಿತ್ತು. ಈ ವೇಳೆ ನ್ಯಾಯಾಲಯವು ಇಬ್ಬರನ್ನು ಜನವರಿ 19 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ರಿಮಾಂಡ್ ಆದೇಶಿಸಿದೆ ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರದ ‘ಅತ್ಯುತ್ತಮ ಪಿಂಚಣಿ ಯೋಜನೆ’ ಇದು, ತಿಂಗಳಿಗೆ 5 ಸಾವಿರವರೆಗೆ ಲಾಭ.!
BREAKING NEWS: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ: 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರ ನೇಮಕ
Yoga mistakes: ‘ಯೋಗಾಸನ’ ಮಾಡುವಾಗ ಈ ತಪ್ಪುಗಳಿಂದ ದೇಹಕ್ಕೆ ಹಾನಿಯಾಗಬಹುದು ; ಸರಿಯಾದ ಮಾರ್ಗ ತಿಳಿಯಿರಿ