ಜಲ್ಪೈಗುರಿ (ಪಶ್ಚಿಮ ಬಂಗಾಳ): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದಿದ್ದು, ಗುರುತು ಪತ್ತೆ ಹಚ್ಚದಂತೆ ಆಕೆಯ ದೇಹವನ್ನು ಎರಡು ಭಾಗಗಳನ್ನಾಗಿ ಮಾಡಿ, ಕಾಲುವೆಗೆ ಎಸೆದಿರುವ ಘಟನೆ ಜಪಶ್ಚಿಮ ಬಂಗಾಳದ ಸಿಲಿಗುರಿ ಪಟ್ಟಣಲ್ಲಿ ನಡೆದಿದೆ.
ತನ್ನ ಪತ್ನಿ ರೇಣುಕಾ ಖಾತುನ್ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾಳೆ ಎಂದು ಶಂಕಿಸಿ, ಮೊಹಮ್ಮದ್ ಅನ್ಸಾರುಲ್ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತ್ರ, ಆಕೆಯ ಗುರುತನ್ನು ಪತ್ತೆ ಹಚ್ಚದಂತೆ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ ಗೋಣಿಚೀಲಗಳಲ್ಲಿ ಕಟ್ಟಿ ತೆಗೆದುಕೊಂಡು ಹೋಗಿ ಕಾಲುವೆಗೆ ಎಸೆದಿದ್ದಾನೆ.
ಮಹಿಳೆ ನಾಪತ್ತೆಯಾದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದರು. ಪತ್ನಿ ನಾಪತ್ತೆಯಾದ 10 ದಿನಗಳ ನಂತರ ವಿಚಾರಣೆ ವೇಳೆ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲೆ ಮತ್ತು ಮುಂಡವನ್ನು ಎರಡು ಬೇರೆ ಬೇರೆ ಗೋಣಿಚೀಲಗಳಲ್ಲಿ ಹಾಕಿ ಮಹಾನಂದಾ ಕಾಲುವೆಗೆ ಎಸೆದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಕೇಸ್: ರಾಜ್ಯದ 6 ಕಡೆ ಎನ್ಐಎ ದಾಳಿ, ಇಬ್ಬರು ಶಂಕಿತ ಉಗ್ರರ ಬಂಧನ
ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಕೇಸ್: ರಾಜ್ಯದ 6 ಕಡೆ ಎನ್ಐಎ ದಾಳಿ, ಇಬ್ಬರು ಶಂಕಿತ ಉಗ್ರರ ಬಂಧನ