ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಿಂಬೆಹಣ್ಣು ದೇಹದ ಆರೋಗ್ಯಕ್ಕೆ ಅಗತ್ಯವಾಗಿದೆ. ಮುಖದ ಕಾಂತಿಯಿಂದ ಹೊಡಿದು ಕೂದಲಿಗೂ ಸಹಾಯಕವಾಗಿದೆ. ರೋಗ ನಿರೋಧಕ ಶಕ್ತಿ ಪಡೆಯಲು ಮುಖ್ಯವಾಗಿ ನಿಂಬೆ ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಹಲವು ಆರೋಗ್ಯ ಪ್ರಯೋಜನಗಳು ಹಾಗೂ ಪೂಜಾ ವಿಧಿ ವಿಧಾನಗಳಲ್ಲೂ ನಿಂಬೆ ಬಳಕೆ ಮಾಡುತ್ತಾರೆ.
ನಿಂಬೆ ಹಣ್ಣು ಮಾತ್ರವಲ್ಲದೇ ಇದರ ಎಲೆಗಳು ಸಹ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ನಿಂಬೆ ಎಲೆಗಳನ್ನು ಬಳಸಬಹುದು.
ನಿಂಬೆ ಎಲೆಗಳ ಸೇವನೆ
ನಿಂಬೆ ಎಲೆಗಳ ಸೇವನೆ ಮಾಡುವುದು ಮತ್ತು ಅದರ ರಸದ ವಾಸನೆ ತೆಗೆದುಕೊಳ್ಳುವುದು ಹಲವು ಪ್ರಯೋಜನಗಳಿವೆ. ಇದನ್ನು ಅಗಿದು ತಿನ್ನುವುದನ್ನು ತಪ್ಪಿಸಬೇಕು. ನೀವು ಇದನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು. ಚಹಾದಲ್ಲಿ ಹಾಕಿ ಮಿಶ್ರಣ ಮಾಡಿ ಸೇವನೆ ಮಾಡಬಹುದು.
ನಿಂಬೆ ಎಲೆಗಳಲ್ಲಿ ಆಂಟಿವೈರಲ್, ಆಂಟಿ-ಆಕ್ಸಿಡೆಂಟ್, ಆಲ್ಕಲಾಯ್ಡ್, ಟ್ಯಾನಿನ್, ಫ್ಲೇವನಾಯ್ಡ್ ಮತ್ತು ಫೀನಾಲಿಕ್ ಅಂತಹ ಔಷಧಿಯ ಅಂಶಗಳನ್ನು ಹೊಂದಿದೆ. ಇದರ ಜೊತೆ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬಿನಂತಹ ಪೋಷಕಾಂಶಗಳು ಸಹ ಇದರಲ್ಲಿ ಇವೆ.
ಅಲ್ಲದೆ ಇದು ಆಂಥೆಲ್ಮಿಂಟಿಕ್, ಆಂಟಿ-ಫ್ಲಾಟ್ಯುಲೆಂಟ್, ಆಂಟಿಮೈಕ್ರೊಬಿಯಲ್, ಕ್ಯಾನ್ಸರ್ ವಿರೋಧಿ, ಉರಿಯೂತ ಪರಿಣಾಮ ಸಹ ಹೊಂದಿದೆ.
ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುವುದಕ್ಕೆ ತಡೆ
ನಿಂಬೆ ಎಲೆಗಳಲ್ಲಿ ಕಂಡು ಬರುವ ಸಿಟ್ರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ಮತ್ತು ಬೆಳವಣಿಗೆ ತಡೆಯುತ್ತದೆ. ಪದೇ ಪದೇ ಕಿಡ್ನಿಯಲ್ಲಿ ಕಲ್ಲುಗಳು ಬಂದರೆ ಇದು ನಿಮಗೆ ದಿವ್ಯೌಷಧ ಆಗಿದೆ.
ಮೈಗ್ರೇನ್ ನೋವಿನಿಂದ ಪರಿಹಾರ
ಮೈಗ್ರೇನ್ ನಿಂದ ಬಳಲುತ್ತಿರುವವರಿಗೆ ನಿಂಬೆ ಎಲೆಗಳು ಪ್ರಯೋಜನಕಾರಿ. ವಾಸ್ತವದಲ್ಲಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ನಿಂಬೆ ಎಲೆಗಳಲ್ಲಿ ಕಂಡು ಬರುತ್ತವೆ. ದೇಹದ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ಮೂಲಕ ಮೈಗ್ರೇನ್ ಸಮಸ್ಯೆ ನಿವಾರಿಸುತ್ತವೆ.
ಮೈಗ್ರೇನ್ ಮತ್ತು ಮಾನಸಿಕ ಕಾಯಿಲೆಗಳಿಂದ ಪರಿಹಾರ ಪಡೆಯಲು ನಿಂಬೆ ಎಲೆಗಳ ವಾಸನೆ ತೆಗೆದುಕೊಳ್ಳುವುದು ಸಹಕಾರಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ನಿದ್ರೆ ಸಮಸ್ಯೆ ಪರಿಹಾರ
ನೀವು ರಾತ್ರಿ ನಿದ್ರೆ ಸಮಸ್ಯೆ ಹೊಂದಿದ್ದರೆ, ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಂಬೆ ಎಲೆಗಳು ನಿಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ.ಇದರಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಆಲ್ಕಲಾಯ್ಡ್ಗಳು ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸಲು ಕೆಲಸ ಮಾಡುತ್ತವೆ. ಅಂತಹ ವೇಳೆ ನಿಂಬೆ ಎಲೆಗಳಿಂದ ತಯಾರಿಸಿದ ಎಣ್ಣೆಯು ನಿಮಗೆ ಪ್ರಯೋಜನಕಾರಿ ಎಂದು ಹೇಳಲಾಗಿದೆ.
ತೂಕ ಇಳಿಕೆಗೆ, ತೂಕ ನಿಯಂತ್ರಣಕ್ಕೆ ಸಹಕಾರಿ
ತೂಕ ಹೆಚ್ಚಾಗುವುದು ನಿಮಗೆ ತೊಂದರೆ ಉಂಟು ಮಾಡುತ್ತದೆ. ಹಲವು ಗಂಭೀರ ಕಾಯಿಲೆಗಳಿಗೆ ನೂಕುತ್ತದೆ. ನಿಂಬೆ ಎಲೆಗಳು ನಿಮ್ಮ ಸಮಸ್ಯೆ ಕೊನೆಗೊಳಿಸಲು ಸಹಕಾರಿ. ನಿಂಬೆ ಎಲೆಗಳಿಂದ ತಯಾರಿಸಿದ ರಸವು ಪೆಕ್ಟಿನ್ ಎಂಬ ಕರಗಬಲ್ಲ ಫೈಬರ್ ಅನ್ನು ಹೊಂದಿದೆ. ಇದು ತೂಕ ನಷ್ಟದಲ್ಲಿ ಪರಿಣಾಮಕಾರಿ ಎಂದು ನಂಬಲಾಗಿದೆ. ನಿಂಬೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ಸೇವಿಸಿ.
ಜಂತುಹುಳುಗಳ ನಿವಾರಣೆ
ನಿಂಬೆ ಎಲೆಗಳು ಜಂತುಹುಳು ನಿವಾರಕ ಗುಣ ಹೊಂದಿವೆ. ಹೊಟ್ಟೆಯ ಹುಳುಗಳನ್ನು ತೊಡೆದು ಹಾಕಲು ಕೆಲಸ ಮಾಡುತ್ತದೆ. ಹೊಟ್ಟೆಯ ಹುಳುಗಳನ್ನು ತೊಡೆದು ಹಾಕಲು ನಿಂಬೆ ಎಲೆಗಳನ್ನು ಬಳಸಬಹುದು. ನಿಂಬೆ ರಸವನ್ನು ಜೇನುತುಪ್ಪದ ಜೊತೆ ಬೆರೆಸಿ ಸೇವಿಸಬಹುದು.