ಚಾಮರಾಜನಗರ : ಗ್ರಾಮ ಲೆಕ್ಕಿಗ ಚರಿತ್ರೆ ಬರೆಯುವ ಸಾಹಸದಲ್ಲಿ ತೊಡಗಿದ್ದು, ಚಾಮರಾಜನಗರ ತಾಲೂಕಿನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಗ್ರಾಮ ಲೆಕ್ಕಿಗ ಶ್ರೀಧರ್ ಮುಂದಾಗಿದ್ದು, ಕೃತಿಗೆ ‘ಚಾಮರಾಜನಗರ ದರ್ಶನಂ’ ಎಂದು ಹೆಸರಿಟ್ಟಿದ್ದಾರೆ.
BIG NEWS: ಅಫ್ಘಾನಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ: 5.1 ತೀವ್ರತೆ ದಾಖಲು| Earthquake in Afghanistan
ಬಳ್ಳಾರಿಯಿಂದ ವಿಭಜನೆಗೊಂಡು ಈಗ ವಿಜಯನಗರ ಜಿಲ್ಲೆಗೆ ಒಳಪಟ್ಟ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಅವರು ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದಿನಕ್ಕೆ 6 ತಾಸು ಕೆಲಸವಷ್ಟೇ ಎಂಬ ಮನಸ್ಥಿತಿ ಹೊರಬಿಟ್ಟು ಚಾಮರಾಜನಗರ ತಾಲೂಕಿನ ಪ್ರತಿ ಹಳ್ಳಿಗಳ ಇತಿಹಾಸ ಹೇಳಲು ಮುಂದಾಗಿದ್ದಾರೆ. ಇವರು ಚಾಮರಾಜನಗರ ತಾಲೂಕಿನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಶ್ರೀಧರ್ ಮುಂದಾಗಿದ್ದು, ಕೃತಿಗೆ ‘ಚಾಮರಾಜನಗರ ದರ್ಶನಂ’ ಎಂದು ಹೆಸರಿಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಈ ಕೃತಿ ಬಿಡುಗಡೆಯಾಗಲಿದೆ.
BIG NEWS: ಅಫ್ಘಾನಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ: 5.1 ತೀವ್ರತೆ ದಾಖಲು| Earthquake in Afghanistan
ಊರಿಗೆ ಆ ಹೆಸರು ಯಾಕೆ ಬಂತು?, ಹಳೆಯ ಹೆಸರೇನು?, ಶಾಸನಗಳಲ್ಲಿ ಊರಿನ ಉಲ್ಲೇಖ, ಊರಲ್ಲಿರುವ ಮತದಾರರು, ಜನಸಂಖ್ಯೆ, ದೇವಾಲಯಗಳು, ದೇವಾಲಯಗಳ ಶೈಲಿ, ಗ್ರಾಮದ ಹಿರಿಯರ ಮಾತುಗಳು, ಊರಲ್ಲಿರುವ ಕೆರೆಗಳ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಡುತ್ತಿದ್ದಾರೆ.https://kannadanewsnow.com/kannada/5-1-magnitude-earthquake-hits-afghanistans-fayzabad/ಕಳೆದ 6-8 ತಿಂಗಳುಗಳು ಕಾಲ ಚರಿತ್ರೆ ಬರೆಯಲು ಹಳ್ಳಿಗಳಿಗೆ ಎಡತಾಕಿ ಶಾಸನಗಳನ್ನು ಕಂಡು, ಎಫಿಗ್ರಾಪಿ ಕರ್ನಾಟಕವನ್ನು ಓದಿಕೊಂಡು ಈ ಇತಿಹಾಸ ಸಾರುವ ಪುಸ್ತಕವನ್ನು ಶ್ರೀಧರ್ ಸಿದ್ಧಪಡಿಸಿದ್ದಾರೆ.