ಬೆಳಗಾವಿ : ಇಬ್ಬರು ಬಾಲಕಿಯರು ಓರ್ವ ಮಹಿಳೆಗೆ ಕಚ್ಚಿದ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
4 ವರ್ಷದ ಆರಾಧ್ಯ ರಮೇಶ್ ಕಿವಿಯನ್ನು ಹುಚ್ಚು ನಾಯಿ ತುಂಡರಿಸಿದೆ. ಅಲ್ಲದೆ 10 ವರ್ಷದ ನಿದಾ ಆಶಿಫ್ ಸಂಶೇದ್ ಮುಖಕ್ಕೆ ನಾಯಿ ಕಚ್ಚಿದೆ. 35 ವರ್ಷದ ಲಕ್ಷ್ಮಿ ಎನ್ನುವ ಮಹಿಳೆಗೆ ಕೈ, ಮತ್ತು ಕಾಲಿಗೆ ಕಚ್ಚಿ ಹುಚ್ಚುನಾಯಿ ಎಳೆದಾಡಿದೆ. ಮೂವರು ಗಾಯಾಳುಗಳನ್ನು ತಕ್ಷಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಚ್ಚುನಾಯಿಯನು ಸೆರೆಹಿಡಿವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಿ ಜನರು ಮನವಿ ಮಾಡಿದ್ದಾರೆ. ಆದರೆ ಎಷ್ಟು ಬಾರಿ ಜನರ ಮನವಿ ಮಾಡಿದರು ಕೂಡ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ ವಹಿಸಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.