ಬೆಳಗಾವಿ : ಬೆಳಗಾವಿಯಲ್ಲಿ ಬೀದಿ ನಾಯಿಗೆ ಹೆದರಿ ಬೈಕ್ ಸವಾರ ಒಬ್ಬ ಸಾವನ್ನಪ್ಪಿರುವ ವಿಚಿತ್ರ ಘಟನೆ ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕುಂಬಾರ ಗಲ್ಲಿಯಲ್ಲಿ ಈ ಒಂದು ಕಡೆ ನಡೆದಿದ್ದು, ವಿಶ್ವನಾಥ ಶಿರೋಳ ಎಂಬ ಬೈಕ್ ಸವಾರ ಸಾವನಪ್ಪಿದ್ದಾನೆ.
ಬೈಕ್ ಅಪಘಾತ ಎಂದು ಭಾವಿಸಿ ಪೊಲೀಸರು ಸುಮ್ಮನಾಗಿದ್ದರು. ಆದರೆ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ನೋಡಿ ಸಾವಿನ ರಹಸ್ಯ ಇದೀಗ ಬಯಲಾಗಿದೆ.ಬೀದಿ ನಾಯಿ ಒಂದು ವಿಶ್ವನಾಥನನ್ನು ಅಟ್ಟಾಡಿಸಿಕೊಂಡು ಬಂದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದ. ವಿಶ್ವನಾಥ್ ವೇಗವಾಗಿ ಓಡಿಸಿದ್ದಾರೆ. ಈ ವೇಳೆ ಮನೆಯ ಗೋಡೆಗೆ ಸ್ಕೂಟಿ ಡಿಕ್ಕಿ ಹೊಡೆದು ಸ್ಥಳದಲ್ಲೇ ವಿಶ್ವನಾಥ್ ಸಾವನಪ್ಪಿದ್ದಾರೆ.








