ಬೆಳಗಾವಿ: ಕಲುಷಿತ ನೀರು ಸೇವಿಸಿ 4 ದಿನಗಳ ಅಂತರದಲ್ಲಿ 90 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.
ಕಲುಷಿತ ನೀರು ಸೇವಿಸಿ ಮೃತಪಟ್ಟ ಮುದೇನೂರು ಗ್ರಾಮದ ನಿವಾಸಿ ವೃದ್ದ ಶಿವಪ್ಪ (70) ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿದೆ. ಕಲುಷಿತ ನೀರು ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿವಪ್ಪ ಮೃತಪಟ್ಟಿದ್ದನು.
ಕಲುಷಿತ ನೀರು ಸೇವಿಸಿ 4 ದಿನಗಳ ಅಂತರದಲ್ಲಿ ಕಳೆದ 4 ದಿನಗಳಲ್ಲಿ ಗ್ರಾಮದ 90 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.ಅಸ್ವಸ್ಥಗೊಂಡ 90ಕ್ಕೂ ಹೆಚ್ಚು ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 4 ಮಂದಿಯ ಸ್ಥಿತಿ ಗಂಭೀರವಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರು ಮಿಶ್ರಣವಾಗಿತ್ತು. ಇದನ್ನು ತಿಳಿದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯವಹಿಸಿದಕ್ಕೆ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. 44 ಪುರುಷರು, 34 ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಇದರಲ್ಲಿ 12 ಬಾಲಕರು , 8 ಮಂದಿ ಬಾಲಕಿಯರು ಅಸ್ವಸ್ಥಗೊಂಡಿದ್ದಾರೆ.
BREAKING NEWS: ಬಾಲಿವುಡ್ ಹಿರಿಯ ನಿರ್ದೇಶಕ `ಎಸ್ಮಯೀಲ್ ಶ್ರಾಫ್’ ಇನ್ನಿಲ್ಲ | Esmayeel Shroff is no more
Viral news : ಪವರ್ ಸ್ಟಾರ್ ‘ಪುನೀತ್’ಗಾಗಿ ಕನ್ನಡ ಹಾಡು ಅರ್ಪಿಸಿದ ಮಲಯಾಳಂ ನಟ ಜಯರಾಮ್ ವಿಡಿಯೋ ವೈರಲ್ | Watch
BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣದ ತನಿಖೆ ಮಾಗಡಿ ಇನ್ಸ್ಪೆಕ್ಟರ್ ಗೆ ವರ್ಗಾವಣೆ