ಬೆಳಗಾವಿ : ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸರಕಾರಿ ಐಬಿಯಲ್ಲಿ ಗುತ್ತಿಗೆದಾರರ ಜೊತೆ ಸೇರಿ ಇಂಜಿನಿಯರ್ಗಳು ಎಣ್ಣೆ ಪಾರ್ಟಿ ಮಾಡಿದರು. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕೂಡ ಅಂತಹ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳು ರಾತ್ರಿಯಿಡಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಠಾಣೆಯಲ್ಲಿ ನಡೆದಿರುವ ಎಣ್ಣೆ ಪಾರ್ಟಿಯ ಫೋಟೋಗಳು ಇದೀಗ ವೈರಲ್ ಆಗಿವೆ.
ಟೇಬಲ್ ಮೇಲೆ ಮಧ್ಯದ ಖಾಲಿ ಬಾಟಲಿ ಇರುವ ಫೋಟೋ ಆಗಿದೆ ಠಾಣೆಯಲ್ಲಿ ಮಧ್ಯದ ಬಾಟಲಿ ಫೋಟೋಗೆ ಇದೀಗ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.