ಬೆಳಗಾವಿ : ಇತ್ತೀಚ್ಚಿಗೆ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಭಾರಿ ಸದ್ದು ಮಾಡಿದ್ದೂ, ಇದೀಗ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಂಡರು ಕೂಡ ಸೀಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಕಡಿಮೆ ಅಂಕ ಪಡೆದುಕೊಂಡವರಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಅಂತಾರಾಜ್ಯ ವಂಚಕನನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೈದ್ರಾಬಾದ್ ಮೂಲದ ಅರವಿಂದ್ ಅರಗೊಂಡ ಎಂದು ತಿಳಿದುಬಂದಿದೆ.
ಬೆಳಗಾವಿ ಮೂಲದ ಓರ್ವ ವಿದ್ಯಾರ್ಥಿ ತಾಯಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಖೆಡ್ಡಾಗೆ ಬೀಳಿಸಲಾಗಿದೆ. ಬಂಧಿತ ಆರೋಪಿಯಿಂದ 12 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 12 ಕಂಪ್ಯೂಟರ್, ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.
2023ರಲ್ಲಿ ಬೆಳಗಾವಿಯಲ್ಲಿ ಅರವಿಂದ್ ನೀಟ್ ಕೌನ್ಸೆಲಿಂಗ್ ಸೆಂಟರ್ ಓಪನ್ ಮಾಡಿದ್ದ. ಹತ್ತು ಜನ ಟೆಲಿ ಕಾಲರ್ಸ್ ನೇಮಕ ಮಾಡಿಕೊಂಡು ವಂಚಿಸುತ್ತಿದ್ದ. ಕಡಿಮೆ ಅಂಕ ಪಡೆದವರಿಗೆ ಫೋನ್ ಮೂಲಕ ಸಂಪರ್ಕಿಸಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಿಗೆ ಭರವಸೆ ನೀಡಿ ಮಕ್ಮಲ್ ಟೋಪಿ ಹಾಕಿದ್ದಾನೆ. ಬಳಿಕ ಕಚೇರಿ ಬಂದ್ ಮಾಡಿ ಮುಂಬೈಗೆ ಪರಾರಿಯಾಗಿದ್ದಾನೆ.