ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರಿಗೆ ‘MES’ ಪುಂಡರಿಂದ ಬೆದರಿಕೆ ಬಂದಿದ್ದು, ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಅಲ್ಲಿ ಅವಾಚ್ಯವಾಗಿ ನಿಂದಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರಿಗೆ ಜೀವ ಬೆದರಿಕೆ ಬಂದಿದ್ದು, ಅನಿಲ್ ದಡ್ಡಿಮನಿ ಹಾಗೂ ಸಂಪತ್ ಕುಮಾರ್ ಗೆ ಬೆದರಿಕೆ ಬಂದಿದೆ.ಇನ್ಸ್ಟಾಗ್ರಾಮ್ ನಲ್ಲಿ ಎಂ ಇ ಎಸ್ ಪುಂಡರು ಪೋಸ್ಟ್ ಹಾಕುವ ಮೂಲಕ ಬಿದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ರಾಯಲ್ ಬೆಳಗಾವ್ಕರ್ ಎಂಬ ಖಾತೆಯಿಂದ ಬೆದರಿಕೆ ಪೋಸ್ಟ್ ಬಂದಿದೆ ಅವಾಚ್ಯವಾಗಿ ನಿಂದಿಸಿ ಎಂಇಎಸ್ ಪುಂಡರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ ಕನ್ನಡ ಕಡ್ಡಾಯ ಮಾಡುವಂತೆ ಹೋರಾಡಿದ್ದಕ್ಕೆ ಬೆದರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.