ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದ್ದು, ಮನೆಯೊಂದರಲ್ಲಿ ಇದ್ದಂತಹ ಬುದ್ಧಿಮಾಂದ್ಯ ಯುವತಿಯ ಮೇಲೆ ಅನ್ಯಕೋಮಿನ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಸಮೀರ್ ಅಬ್ಬಾಸ್ ಧಾಮಣೇಕರ(30) ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯ ಈ ಒಂದು ಘಟನೆಯಿಂದ ಗ್ರಾಮ ಬಿಗುವಿನ ವಾತಾವರಣದಿಂದ ಕೂಡಿದೆ. ಇವತಿಗೆ ಮನೆಯವರು ಹೊರಗಡೆ ತೆರಳಿದ್ದಾಗ ಈ ವೇಳೆ ಮನೆಗೆ ಹೋಗಿದ್ದ ಆರೋಪಿ ಯುವತಿಯ ಬಟ್ಟೆ ಬಿಚ್ಚಿ ತಾನು ಕೂಡ ಬೆತ್ತಲಾಗಿದ್ದಾನೆ.
ಈ ವೇಳೆ ಯುವತಿ ಕುಟುಂಬ ಸದಸ್ಯರೊಬ್ಬರು ಮನೆಗೆ ಆಗಮಿಸಿದಾಗ ಸಿಕ್ಕಿಬಿದ್ದಿದ್ದಾನೆ. ಯುವತಿ ಮನೆಯವರು ಸಮೀರ್ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.