ಬೆಳಗಾವಿ : ಮನೆಯಲ್ಲಿ ಹೇಳದೆ ಕಾರು ತೆಗದುಕೊಂಡು ಹೋಗಿದ್ದ ವ್ಯಕ್ತಿಯೊಬ್ಬರು ಘಟಪ್ರಭಾ ನದಿಗೆ ಕಾರಿನ ಸಮೇತ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿ ದಡ್ಡಿ ಗ್ರಾಮ ನಿವಾಸಿಯಾಗಿದ್ದಂತ ಕಿರಣ್ ನಾವಲಗಿ (45) ಎಂಬಾತ ಕಾರು ಚಾಲನೆ ಮಾಡಿಕೊಂಡು ತೆರಳುತ್ತಿದ್ದಂತ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಬ್ಯೂಟಿ ಪಾರ್ಲರ್ ಉದ್ಯಮ ನಡೆಸುತ್ತಿದ್ದ ಮೃತ ಕಿರಣ್ ನಾವಲಗಿ ಡಿಸೆಂಬರ್ 30ರಂದು ಮನೆಯಲ್ಲಿ ಯಾರಿಗೂ ತಿಳಿಸದೆ ಮನೆ ತೊರೆದಿದ್ದರು.
ಕಿರಣ್ ಅವರಿಗೆ ಉದ್ಯಮದಲ್ಲಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಸ್ಯ ಕ್ರೇನ್ ಸಹಾಯದಿಂದ ನದಿಗೆ ಬಿದ್ದಂತಹ ಕಾರನ್ನು ಪೊಲೀಸರು ಮೇಲೆತ್ತಿದ್ದಾರೆ. ಘಟನೆ ಕುರಿತಂತೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.