ಬೆಳಗಾವಿ: ಬೆಳಗಾವಿಯಲ್ಲಿ 20 ದಿನ ಕಳೆದರೂ ಚಿರತೆ ಕೈಗೆ ಸಿಗದೇ ಓಡಾಡುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಈ ಭಾಗದ ಶಾಲೆ, ಕಚೇರಿಗಳಿಗೆ ಜನತೆ ಹೋಗಲು ಪರದಾಡುತ್ತಿದ್ದು, ಈ ಭಾಗದ ಶಾಲೆಗಳಿಗೆ ಈಗಾಗಲೇ ರಜೆಯನ್ನು ನೀಡಲಾಗಿದ್ದು, ಆನ್ಲೈನ್ ಮೂಲಕ ಮಕ್ಕಳಿಗೆ ರಜೆ ನೀಡುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ 20 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದು, ಸುಸ್ತಾಗಿದ್ದಾರೆ.
ಈ ನಡುವೆಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು `ಲೈಂಗಿಕ ಆಕರ್ಷಣೆ’ ತಂತ್ರ ಅನುಸರಿಸಲು ಮುಂದಾಗಿದ್ದು, ನಗರ ಸಮೀಪದ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರ ತಂದು ಸಿಂಪಡಿಸಲಾಗಿದೆ. ಅದರ ವಾಸನೆಗೆ ಆಕರ್ಷಿತವಾಗಿ ಚಿರತೆ ಬೋನಿನ ಕಡೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.