ಬೆಳಗಾವಿ : ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಯುವಕ ಹಾಗೂ ಆತನ ಸಹೋದರರನ್ನು ಯುವತಿಯ ತಂದೆಯೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ಹಳೇಗೋಡಿ (22), ಮಾಯಪ್ಪ (20) ಕೊಲೆಯಾದ ಯುವಕರು. ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಕೊಲೆ ಆರೋಪಿ. ಯುವಕ ಯಲ್ಲಪ್ಪ ಹಳೇಗೋಡಿ ಯುವತಿಯ ಹಿಂದೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಇದನ್ನು ತಿಳಿದ ಯುವತಿಯ ತಂದೆ ಫಕೀರಪ್ಪ ಭಾಂವಿಹಾಳ ನನ್ನ ಮಗಳ ತಂಟೆಗೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ಇದರಿಂದ ಯುವಕ ಯಲ್ಲಪ್ಪ ಹಾಗೂ ಯುವತಿಯ ತಂದೆಯ ಮಧ್ಯ ಗಲಾಟೆ ಉಂಟಾಗಿದೆ. ಈ ವೇಳೆ ಫಕೀರಪ್ಪ ಚಾಕುವಿನಿಂದ ಯಲ್ಲಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಬಿಡಿಸಲು ಬಂದ ಯುವಕನ ಅಣ್ಣ ಮಾಯಪ್ಪನ ಮೇಲೂ ಹಲ್ಲೆ ಮಾಡಿ ಗಾಯಗೋಳಿಸಿದ್ದಾನೆ. ಯಲ್ಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಅಣ್ಣ ಮಾಯಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇದೀಗ ಆರೋಪಿ ಫಕೀರಪ್ಪ ಬಂಧನಕ್ಕೆ ಪೊಲೀಸರು ಬಲೇಬಿಸಿದ್ದಾರೆ.