ಬೆಳಗಾವಿ : ಹಿರಿಯರಿಂದ ಬಂದಂತಹ ಆಸ್ತಿಯನ್ನು ಕೇವಲ ತಾನು ಒಬ್ಬನೇ ಅನುಭವಿಸಬೇಕೆಂದು ಅಣ್ಣನೊಬ್ಬ ಇಡೀ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಇದಕ್ಕೆ ತಮ್ಮ ನನಗೂ ಪಾಲು ಬೇಕು ಎಂದು ಕೇಳಿದಾಗ ಅವನ ಹಾಗೂ ಆತನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ್ ತಾಲೂಕಿನ ಅಲಕನೂರಿನಲ್ಲಿ ನಡೆದಿದೆ.
ಆಸ್ತಿ ತನ್ನ ಹೆಸರಿಗೆ ಬರೆಸಿಕೊಂಡ ಅಣ್ಣನನ್ನು ಕರೆಪ್ಪ ಎಂದು ಹೇಳಲಾಗುತ್ತಿದ್ದು, ಆಸ್ತಿಯನ್ನು ತಮ್ಮ ಹೆಸರಿಗೆ ಮಾಡುವಂತೆ ಅಣ್ಣನಿಗೆ ಕರೆಪ್ಪನ ತಮ್ಮ ಗೋಪಾಲ ಕೇಳಿದ್ದಾನೆ. ಇಷ್ಟಕ್ಕೆ ತಮ್ಮ ಗೋಪಾಲ ಹಾಗೂ ಆತನ ಕುಟುಂಬದ ಮೇಲೆ ಕರೆಪ್ಪ ಹಲ್ಲೆ ಮಾಡಿದ್ದಾನೆ.ಅಲಕನೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಈ ಒಂದು ಗಲಾಟೆ ನಡೆದಿದೆ.
ಗೋಪಾಲ ಮಾಂಗ, ಶೈನಪ್ಪ ಮಾಂಗ, ಆನಂದ್ ಮಾಂಗ, ಕುಲಾಬಾಯಿ ಮಾಂಗ, ಬಸವರಾಜ ಮಾಂಗ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಹಾರುಗೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕರೆಪ್ಪ ಮತ್ತು ಆತನ ಮಕ್ಕಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.