ನವದೆಹಲಿ : ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಲು ಶೀಘ್ರವೇ 6 ಮಂದಿ ಕೇಂದ್ರ ಸಚಿವರು ಇರುವ ತಟಸ್ಥ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದು ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ನಡೆದ ಮಹಾ ಸಿಎಂ ಮತ್ತು ಕರ್ನಾಟಕ ಸಿಎಂಗಳ ನಡುವೆ ನಡೆದ ಸಭೆಯಲ್ಲಿ ಉಭಯ ನಾಯಕರುಗಳಿಂದ ಮಾಹಿತಿಯನ್ನು ಪಡೆದುಕೊಂಡು ನಂತರ ಮಾತನಾಡಿದ ಅಮಿತ್ ಶಾ ಈ ಬಗ್ಗೆ ಸುಪ್ರಿಂಕೋರ್ಟ್ ಅಂತಿಮ ಆದೇಶ ಹೊರಡಿಸಲಿದೆ. ಬೆಳಗಾವಿ ಗಡಿ ವಿಚಾರದಲ್ಲಿ ಯಾವುದೇ ಗಡಿಬಿಡಿ ಬೇಡ ಅಲ್ಲಿವರೆಗೂ ಸುಮ್ಮನೆ ಇರಿ ಎಂದು ಸೂಚನೆ ನೀಡಿದ್ದಾರೆ.
ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಲು ಶೀಘ್ರವೇ 6 ಮಂದಿ ಕೇಂದ್ರ ಸಚಿವರು ಇರುವ ತಟಸ್ಥ ಸಮಿತಿ ರಚಿಸಲಾಗುವುದು, ಅಲ್ಲಿಯವರೆಗೂ ನೀವು ಸುಮ್ಮನಿರಿ ಎಂದು ಇಬ್ಬರು ಸಿಎಂಗಳಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇಬ್ಬರು ಕೂಡ ಸುಪ್ರಿಂಕೋರ್ಟ್ ನಿಂದ ಬರೋ ಅಂತಿಮ ತೀರ್ಪಿನ ತನಕ ತಮ್ಮ ತಮ್ಮ ಜವ್ದಾರಿಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಇದೇ ವೇಳೇ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಸಮಸ್ಯೆಗಳನ್ನು ಸಾಂವಿಧಾನಿಕ ವಿಧಾನಗಳಿಂದ ಮಾತ್ರ ಇತ್ಯರ್ಥಗೊಳಿಸಬಹುದು, ರಸ್ತೆಯಲ್ಲಿ ಅಲ್ಲ ಅಂತ ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ. ಗಡಿಯಲ್ಲಿ ಶಾಂತಿಯನ್ನು ಸ್ಥಾಪಿಸಬೇಕಿದೆ. ನೀವೆಲ್ಲರೂ ಇದಕ್ಕೆ ಸಹಕರಿಸ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಸಿದ್ದರಾಮಯ್ಯ ನಾಟಿಕೋಳಿ-ರಾಗಿಮುದ್ದೆ ತಿನ್ನಲು ವರುಣಾಗೆ ಬರುತ್ತಿದ್ದಾರೆ : ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ