ಬೆಳಗಾವಿ : ದೇಶದಾದ್ಯಂತ ಇದೀಗ ಅತ್ಯಾಚಾರ ಪ್ರಕರಣಗಳು ಹಾಗೂ ಲೈಂಗಿಕ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಹಜವಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಒಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಈ ಕುರಿತು ಮಹಿಳೆ ಬೆಳಗಾವಿಯ ಖಡೆ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಹೌದು ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಬಿಜೆಪಿ ಮುಖಂಡ ನವ ವಿವಾಹಿತೆಗೆ ವಿಷ ಕುಡಿಸಿದ್ದಾನೆ. ಅಲ್ಲದೆ ಈ ಕುರಿತು ಗಂಡ ಹಾಗೂ ಮಾವನ ಮೇಲೆ ಆರೋಪ ಮಾಡಿಸಲು ವಿಷ ಕುಡಿಸಿದ್ದಾನೆ ಎನ್ನಲಾಗುತ್ತಿದೆ.ಪತಿ ಹಾಗೂ ಮಾವನ ವಿರುದ್ಧ ದೂರು ನೀಡಲು ಒತ್ತಡ ಹೇರಿದ್ದಾನೆ. ಗಂಡನ ವಿರುದ್ಧವೆ ಬಿಜೆಪಿ ಮುಖಂಡ ದೂರು ಕೊಡಿಸಿದ್ದ.
ಆದರೆ ಇದೀಗ ಮಹಿಳೆ ಬಿಜೆಪಿ ಮುಖಂಡನ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಬಿಜೆಪಿ ಮುಖಂಡನ ವಿರುದ್ಧವೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ಕೊಟ್ಟಿದ್ದಾಳೆ. ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಹಾಗೂ ಪುತ್ರ ಜಶ್ವರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಇದೀಗ ಬಿಜೆಪಿ ಮುಖಂಡನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾಳೆ.
ಅಲ್ಲದೆ ಸಂತ್ರಸ್ತ ಮಹಿಳೆಯು ಬೆಳಗಾವಿಯ ಎಸ್ಪಿ ಕಚೇರಿಗೂ ಭೇಟಿ ನೀಡಿ ದೂರು ಸಲ್ಲಿಸಿದ್ದು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಕರೋನಾ ಸಮಯದಲ್ಲಿ ನನಗೆ ಪರಿಚಯವಾಗಿದ್ದ. ನನ್ನ ತಂದೆ ತೀರಿಹೋದ ಬಳಿಕ ತಂದೆ ಸ್ಥಾನದಲ್ಲಿ ಇಂದು ನನ್ನ ಮದುವೆ ಕೂಡ ಮಾಡಿದ್ದ.
ಆದರೆ ತನ್ನ ಮನೆಯಲ್ಲಿ ನನ್ನನ್ನು ಒತ್ತಾಯಪೂರ್ವಕವಾಗಿ ಇರಿಸಿಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಈ ಒಂದು ಕೃತ್ಯ ನನ್ನ ಗಂಡ ಹಾಗೂ ಮಾವ ಮಾಡಿದ್ದಾರೆಂದು ಅವರ ವಿರುದ್ಧ ದೂರು ಕೊಡಿಸಲು ವಿಷ ಕುಡಿಸಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ಉಲ್ಲೇಖಿಸಿದ್ದಾಳೆ.