ಬೆಳಗಾವಿ : ವಾಣಿಜ್ಯ ಮಳಿಗೆಯ ಕುರಿತು ಮಾಹಿತಿ ಪಡೆಯಲು ಪುರಸಭೆಗೆ ಬಂದಿದ್ದ ವಕೀಲರೊಬ್ಬರೂ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯ ಪುರಸಭೆ ಕಚೇರಿಯಲ್ಲಿ ಈ ಒಂದು ಘಟನೆ ನಡೆದಿದೆ.
ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮೇಲೆ ವಕೀಲನೆಂದೆ ಹಲ್ಲೆ ನಡೆದಿದೆ. ಪುರಸಭೆ ಮುಖ್ಯ ಅಧಿಕಾರಿ ಮೇಲೆ ವಕೀಲ ಮಿತೇಶ್ ಪಟ್ಟಣ ಹಲ್ಲೆ ಮಾಡಿದ್ದಾರೆ. ಪಟ್ಟಣದ ವಾಣಿಜ್ಯ ಮಳಿಗೆ ಬಗ್ಗೆ ವಕೀಲರು ಮಾಹಿತಿ ಕೇಳಿದ್ದರು. ಮಳಿಗೆ ಬಗ್ಗೆ ಮಾಹಿತಿ ಕೇಳಿ ಮುಖ್ಯ ಅಧಿಕಾರಿ ಜೊತೆಗೆ ವಾಗ್ವಾದ ಮಾಡಿದ್ದಾರೆ.
ಈ ವೇಳೆ ನಿಯಂತ್ರಣ ಕಳೆದುಕೊಂಡ ವಕೀಲರು ಮಾತಿಗೆ ಮಾತು ಬೆಳೆದು ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಅಥಣಿ ಸರಕಾರಿ ಆಸ್ಪತ್ರೆಗೆ ಸದ್ಯ ಪುರಸಭೆಯ ಮುಖ್ಯಾಧಿಕಾರಿ ದಾಖಲಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.