ಬೆಳಗಾವಿ : ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮೃತ ಮಗುವಿನ ಸಂಬಂಧಿಕರಿಂದ ಆಸ್ಪತ್ರೆಯಲ್ಲಿ ಗಲಾಟೆ ನಡೆದಿದ್ದು, ಆಸ್ಪತ್ರೆ ಪರಿಕಲ್ಪಗಳನ್ನು ಒಡೆದು ಹಾಕಿ ಸಂಬಂಧಿಕರು ಇದೀಗ ಆಕ್ರೋಶ ಹೊರಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.
ಗೋಕಾಕ್ ಪಟ್ಟಣದ ಡಾ. ಮಹಾಂತೇಶ್ ಕಡಾಡಿ ಎಂಬುವವರಿಗೆ ಸೇರಿದ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕನ ಬ್ಯಾಳಿ ಕಾಟ ಬಳಿ ಇರುವ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ಶಿವಾನಂದ ನಿಂಗಪ್ಪ ಬಡಬಡಿ ಎಂಬುವರ 7 ತಿಂಗಳ ಮಗು ಸಾವನ್ನಪ್ಪಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ತಡ ರಾತ್ರಿ ಮಗು ಸ್ಥಿತಿ ಗಂಭೀರವಾಗಿದೆ ಎಂದು ಸಿಬ್ಬಂದಿ ತಿಳಿಸಿದರು. ಬೆಳಿಗ್ಗೆ ಮಗುವನ್ನು l ಬೇರೆ ಆಸ್ಪತ್ರೆಗೆ ದಾಖಲಿಸಿ ಅಂದಿದ್ದರು. ಆದರೆ ಆಂಬುಲೆನ್ಸ್ ಬರುವಷ್ಟರಲ್ಲಿ ಆಸ್ಪತ್ರೆ ವೈದ್ಯರು ಮಗು ಮೃತಪಟ್ಟಿದ್ದೆ ಎಂದಿದ್ದಾರೆ. ಹೀಗಾಗಿ ಆಸ್ಪತ್ರೆಯ ಪರಿಕರ ಒಡೆದು ಹಾಕಿ, ಡಾ.ಮಹಾಂತೇಶ್ ಕಡಾಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಗೋಕಾಕ್ ಪೊಲೀಸ್ರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗೋಕಾಕ್ ನಗರ ಠಾಣೆಯಲ್ಲಿ ನಡೆದ ಪ್ರಕರಣವಾಗಿದೆ.