ಬೆಳಗಾವಿ : ಹುಚ್ಚುನಾಯಿ ಒಂದು ನ್ಯಾಯಾಲಯ ಆವರಣಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿದ್ದು, ಈ ವೇಳೆ ಆರು ಜನರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನ್ಯಾಯಾಲಯ ಆವರಣದಲ್ಲಿ ಈ ಘಟನೆ ನಡೆದಿದೆ.
SSLC ಪರೀಕ್ಷೆ: ಇಂದು 8. ಲಕ್ಷ ವಿದ್ಯಾರ್ಥಿಗಳು ಹಾಜರ್, 15,402 ಮಂದಿ ಗೈರು
ಗಾಯಾಳುಗಳು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ನಂತರ ಪಟ್ಟಣದ ಬಸವ ವೃತ್ತದಲ್ಲಿ ನಾಯಿ ಓಡಿಸಲು ಕೈಯಲ್ಲಿ ದೊಣ್ಣೆ ಹಿಡಿದು ಜನರು ಪ್ರಯತ್ನ ಮಾಡಿದ್ದಾರೆ. ಓರ್ವ ಸ್ಥಳೀಯ ದೊಣ್ಣೆಯಿಂದ ಹೊಡೆದು ನಾಯಿ ಕೊಲ್ಲಲು ಯತ್ನಿಸಿದರೂ ಅಲ್ಲಿಂದ ಶ್ವಾನ ಪರಾರಿಯಾಗಿದೆ.
BREAKING: ಆನೇಕಲ್ ನಲ್ಲಿ ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ಬೃಹತ್ ತೇರು, ತಪ್ಪಿದ ಭಾರೀ ಅನಾಹುತ
ಇವಳೇ ಗಾಯಗೊಂಡವರಲ್ಲಿ ಒಬ್ಬರು ವ್ಯಕ್ತಿ ಮಾತನಾಡಿ ನಾನು ನ್ಯಾಯಾಲಯ ಆವರಣದೊಳಗೆ ಹೋಗುವಾಗ ನನ್ನ ಕಾಲಿಗೆ ಕಚ್ಚಿ ನಾಯಿ ಮುಂದೆ ಹೊಡಿತು ಈ ವೇಳೆ ಹೋಗುವಾಗ ಹಲವರಿಗೆ ಕಚ್ಚಿ ಗಾಯ ಮಾಡಿ ತಪ್ಪಿಸಿಕೊಂಡಿದೆ ಆದಷ್ಟು ಬೇಗ ಆ ನಾಯಿಯನ್ನು ಹಿಡಿಯಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದೇ ರೀತಿ ಹಲವಾರು ಜನರಿಗೆ ತೊಂದರೆ ಕೊಡುತ್ತದೆ ಎಂದು ಅವರು ಆಗ್ರಹಿಸಿದರು.