ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಸ್ಟೀಲ್ ಅಥವಾ ಸಿಲ್ವರ್ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಹಿಂದಿನ ಕಾಲದಿಂದಲೂ ತಾಮ್ರದ ವಸ್ತುಗಳಿಗೆ ಹೆಚ್ಚಿನ ಮಹತ್ವ ಇದೆ. ಇವುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ಆದರೆ ತಾಮ್ರದ ಪಾತ್ರೆಗಳನ್ನು ಬಳಸುವುದಕ್ಕೆ ಕೆಲವು ನಿಯಮಗಳಿವೆ. ಅವುಗಳನ್ನು ನೆನಪಿಡಬೇಕು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ ಕೋಟಿ ಬಂಡವಾಳ ಹೂಡಿಕೆ – ಸಿಎಂ ಬೊಮ್ಮಾಯಿ
ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ.
ತಾಮ್ರದ ಪಾತ್ರೆ ಬಳಕೆಯ ಆರೋಗ್ಯ ಪ್ರಯೋಜನಗಳು
ಉತ್ಕರ್ಷಣ ನಿರೋಧಕ ಗುಣ
ತಾಮ್ರವು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಇದು ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ಕಡಿಮೆ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಯಂಗ್ ಆಗಿ ಮತ್ತು ಫಿಟ್ ಆಗಿ ಕಾಣಿಸಬಹುದು.
ಸಂಧಿವಾತ, ಕೀಲು ನೋವು ನಿವಾರಣೆ
ಸಂಧಿವಾತ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ. ಇದು ಪ್ಲ್ಯಾಟಿಂಗ್ ಗುಣಲಕ್ಷಣ ಹೊಂದಿದೆ. ರುಮಟಾಯ್ಡ್ ಸಂಧಿವಾತದಿಂದ ಉಂಟಾಗುವ ಕೀಲು ನೋವು ತಡೆಯುತ್ತದೆ.
ರಕ್ತಹೀನತೆ ಕಡಿಮೆ ಮಾಡುತ್ತದೆ
ತಾಮ್ರ ಹಲವು ಔಷಧೀಯ ಗುಣ ಹೊಂದಿದೆ. ರಕ್ತಹೀನತೆ ಅಪಾಯ ಕಡಿಮೆ ಮಾಡುತ್ತದೆ. ದೇಹದಲ್ಲಿ ತಾಮ್ರದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಒಂದು ಲೋಟ ನೀರು ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ.
ತೂಕ ನಷ್ಟಕ್ಕೆ ಸಹಾಯಕ
ತೂಕವನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆ ಸುಧಾರಿಸಲು, ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್, ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆ ನಿಯಂತ್ರಿಸಲು, ಚರ್ಮದ ಆರೋಗ್ಯ ಮತ್ತು ಮೆಲನಿನ್ ಉತ್ಪಾದನೆಗೆ ಸಹಕಾರಿ ಆಗಿದೆ.
ತಾಮ್ರದ ಪಾತ್ರೆ ಬಳಸುವ ಪ್ರಮುಖ ನಿಯಮಗಳು
ತಜ್ಞರ ಪ್ರಕಾರ ತಾಮ್ರದ ಪಾತ್ರೆ ನೀರನ್ನು ಕುಡಿಯಲು 8 ಗಂಟೆಗಳ ಕಾಲ ಪಾತ್ರೆಯಲ್ಲಿ ನೀರು ಇಡಬೇಕು. ಆಗ ತಾಮ್ರದ ಎಲ್ಲಾ ಗುಣಲಕ್ಷಣಗಳು ನೀರನ್ನು ಪ್ರವೇಶಿಸುತ್ತವೆ. ಈ ನೀರನ್ನು ಯಾವಾಗ ಬೇಕಾದರೂ ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪ್ರಯೋಜನ ಹೆಚ್ಚು. ಒಂದೇ ಉಸಿರಿನಲ್ಲಿ ನೀರು ಕುಡಿಯಬಾರದು.
ತಾಮ್ರದ ನೀರಿನ ಪರಿಣಾಮವು ಬಿಸಿ. ಅಸಿಡಿಟಿ ಇರುವವರು ಇದನ್ನು ಸೇವಿಸಬಾರದು. ಕಿಡ್ನಿ ಮತ್ತು ಹೃದ್ರೋಗಿಗಳು ಈ ನೀರನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ತಾಮ್ರದ ಪಾತ್ರೆಗಳಲ್ಲಿ ಹಾಲು, ಹುಳಿ ಪದಾರ್ಥಗಳು ಮತ್ತು ಇತರ ಆಹಾರ ಪದಾರ್ಥ ಸೇವಿಸಬೇಡಿ. ತಾಮ್ರದ ಬಾಟಲಿಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು.
ತಾಮ್ರದ ಪಾತ್ರೆ ಸ್ವಚ್ಛಗೊಳಿಸುವುದು ಹೇಗೆ?
ತಾಮ್ರದ ಪಾತ್ರೆಗಳನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು, ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಮತ್ತು ಕತ್ತರಿಸಿದ ಭಾಗಕ್ಕೆ ಉಪ್ಪು ಸೇರಿಸಿ. ಅದನ್ನು ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಬೇಕು. ಚಮಚ ಉಪ್ಪು ಮತ್ತು 1 ಕಪ್ ಬಿಳಿ ವಿನೆಗರ್ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ತಾಮ್ರದ ಮೇಲೆ ಮೃದುವಾದ ಬಟ್ಟೆಯಿಂದ ಉಜ್ಜಿ ಮತ್ತು ನೀರಿನಿಂದ ಸ್ವಚ್ಛಗೊಳಿಸಬಹುದು.
ಪುರುಷರೇ ಎಚ್ಚರ..! 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ʼಹೃದಯಘಾತ, ಪಾರ್ಶ್ವವಾಯು ಸಮಸ್ಯೆʼ ಹೆಚ್ಚಳ: ಅಧ್ಯಯನ