ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಯರ್ ಪ್ರಿಯರಿಗೆ ಶಾಕ್ ನೀಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಬಿಯರ್ ದರವನ್ನು ರೂ.10ರಿಂದ 45 ರೂ.ವರೆಗೆ ಏರಿಕೆ ಮಾಡಿ ಆದೇಶಿಸಿದೆ.
ಕರ್ನಾಟಕದಲ್ಲಿ ಮದ್ಯಪ್ರಿಯರಿಗೆ ಕಾಂಗ್ರೆಸ್ ಸರ್ಕಾರ ಶಾಕ್ ನೀಡಿದೆ. ಬಜೆಟ್ ಮಂಡನೆಯಾದ ನಂತ್ರ ಏರಿಕೆಯಾಗುತ್ತಿದಂತ ಬಿಯರ್ ಬೆಲೆಯನ್ನು, ಸತತ ಎರಡನೇ ಬಾರಿಗೆ ಅದಕ್ಕೂ ಮೊದಲೇ ಏರಿಕೆ ಮಾಡಿದೆ.
ಕಳೆದ 6 ತಿಂಗಳ ಹಿಂದಷ್ಟೇ ಆಮದು ವಸ್ತುಗಳ ಮೇಲಿನ ಬೆಲೆ ಹೆಚ್ಚಳ ಮಾಡಲಾಗಿತ್ತು. ಈಗ ಸುಂಕವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಹೀಗಾಗಿ 10 ರೂ ನಿಂದ 45 ರೂಪಾಯಿಯವರೆಗೆ ಬಿಯರ್ ಬೆಲೆ ಏರಿಕೆಯಾದಂತೆ ಆಗಿದೆ. ಆದರೇ ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗಿಲ್ಲ.
ಯಾವ ಬಿಯರ್ ಬೆಲೆ ಎಷ್ಟು ಹೆಚ್ಚಳ?
- ಲೆಜೆಂಡ್ ಬಿಯರ್ ಬೆಲೆಯನ್ನು ರೂ.100 ಇದ್ದದ್ದು ರೂ.145ಕ್ಕೆ ಏರಿಕೆಯಾಗಲಿದೆ.
- ಪವರ್ ಕೂಲ್ ಬಿಯರ್ ಬೆಲೆ ರೂ.130ರಿಂದ ರೂ.155ಕ್ಕೆ ಏರಿಕೆ
- ಬ್ಲ್ಯಾಕ್ ಪೋರ್ಟ್ ಬಿಯರ್ ಬೆಲೆ ರೂ.145ರಿಂದ ರೂ.160ಕ್ಕೆ ಏರಿಕೆ
- ಹಂಟರ್ ಬಿಯರ್ ಬೆಲೆ ರೂ.180 ರಿಂದ ರೂ.190
- ವುಡ್ ಪೆಕರ್ ಕ್ರೆಸ್ಟ್ ರೂ.240ರಿಂದ ರೂ.250
- ವುಡ್ ಪೆಕರ್ ಗ್ಲೈಡ್ ರೂ.230ರಿಂದ ರೂ.240ಕ್ಕೆ ಏರಿಕೆಯಾಗಲಿದೆ.
BIG NEWS : ‘ಸಿಎಂ, ಕೆಪಿಸಿಸಿ’ ಎರಡು ಸ್ಥಾನ ಯಾವುದೇ ಕಾರಣಕ್ಕೂ ಬದಲಾಗಲ್ಲ : ಸಚಿವ ಭೈರತಿ ಸುರೇಶ್ ಹೇಳಿಕೆ
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin