ವಿಜಯನಗರ: ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿ ಒಂದೂವರೇ ವರ್ಷ ಮತ್ತು ಮತಾಂತರ ನಿಷೇಧ ಕಾನೂನು ಜಾರಿಯಾಗಿ 6 ತಿಂಗಳಾಯಿತು. ಆದರೆ ಯಾವುದು ಕೂಡ ಜಾರಿಗೆ ಬರುತ್ತಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
BREAKING NEWS: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ; ಕರಾವಳಿ ಆರೆಂಜ್ ಅಲರ್ಟ್
ಹೊಸಪೇಟೆಯಲ್ಲಿ ಮಾತನಾಡಿದ ಅವರು, ಕಾನೂನು ಮಾಡಿದ್ದಾರೆ, ಆದ್ರೆ ಅದನ್ನ ಇಂಪ್ಲೀಮೆಂಟ್ ಆಗ್ತಿಲ್ಲಾ. ಗೋಮಾಂಸ ರಫ್ತು ಹಗರಿಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕೇಂದ್ರ ಮಂತ್ರಿಗಳೇ ಹೇಳಿದ್ದಾರೆ.ಇಡೀ ರಾಜ್ಯದಲ್ಲಿ ಗೋ ಹತ್ಯೆ ನಡೆಯುತ್ತಿದೆ .
BREAKING NEWS: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ; ಕರಾವಳಿ ಆರೆಂಜ್ ಅಲರ್ಟ್
ಅದನ್ನ ನಿಲ್ಲಿಸೋಕೆ ಆಗ್ತಿಲ್ಲಾ, ಕಾನೂನು ಕೇವಲ ಹೆಸರಿಗಷ್ಟೆಯಾಗಿದೆ. ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ಬುಲ್ಡೋಜರ್ ಹಾಕಿ ತೆಗಿಬೇಕು, ನೀವು ತೆಗೆಯುತ್ತಿರೋ ನಾವು, ತೆಗೆಯೋಣವಾ-? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಾರಿ ಚುನಾವಣೆ ಇದೆ, ನೀವು ಇದು ಸರಿಪಡಿಸಲಿಲ್ಲಾ ಅಂದ್ರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಈ ಹಿಂದೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ ಅಂತ ಕೇಳ್ತಿದ್ವಿ, ಆದ್ರೆ ಈಗ ಎಲ್ಲರ ಮೇಲೂ ನಡೆಯುತ್ತಿದ್ದು, 3 ಸಾವಿರ ಕಾನೂನು ಬಾಹಿರ ಚರ್ಚ್ ಗಳಿವೆ.
15 ದಿನದೊಳಗಡೆ ಈ ಕಾಯ್ದೆಗಳು ಇಂಪ್ಲೀಮೆಂಟ್ ಮಾಡಬೇಕಿದೆ ಇಲ್ಲಾವಾದ್ರೆ, ಎಲ್ಲಾ ಹಿಂದೂ ಸಂಘಟನೆಗಳು ಹೋರಾಟ ಮಾಡಬೇಕಾಗುತ್ತದೆ ಎಂದರು.