ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮುಖದ ಮೇಲೆ ಭಂಗು ಬರಲು ಮುಖ್ಯ ಕಾರಣ ಹಾರ್ಮೋನ್ಸ್ ಹೆಚ್ಚು ಕಡಿಮೆಯಾದಾಗ. ಹೀಗೆ ಅಕಾಲಿಕವಾಗಿ ಮುಖದ ಮೇಲೆ ಭಂಗು ಬಂದರೆ ಏನು ಮಾಡಬೇಕೆಂದು ತಿಳಿಸಿಕೊಡುತ್ತೇವೆ. ಭಂಗಿನ ಕಲೆಗೆ ನಿವಾರಣಗೆ ಕೆಲ ಸುಲಭವಾದ ಮನೆಮದ್ದು ಇದೆ. ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಮುಖದ ಭಂಗಿನ ನಿವಾರಣೆಗೆ ಬೇಕಾಗು ಪದಾರ್ಥಗಳು ಮತ್ತು ಅದರ ಗುಣಗಳ ವಿವರ ಹೀಗಿದೆ.
ಆಲುಗಡ್ಡೆ: ಭಂಗಿನ ನಿವಾರಣೆಗೆ ಆಲುಗಡ್ಡೆ ಸೂಕ್ತ ಪರಿಹಾರ ನೀಡುತ್ತದೆ. ಆಲುಗಡ್ಡೆಯಲ್ಲಿ ಬ್ಲೇಮಿಷಿಂಗ್ ಎಂಬ ಗುಣವಿದ್ದು ಇದು ಬ್ಲೀಚಿಂಗ್ ರೂಪದಲ್ಲಿ ಕೆಲಸ ಮಾಡಿ ಬಣ್ಣ ತಿಳಿಗೊಳಿಸುವ ಕೆಲಸ ಮಾಡುತ್ತದೆ. ಬಣ್ಣವನ್ನು ಬದಲಾಯಿಸುವ ಗುಣ ಆಲುಗಡ್ಡೆಯಲ್ಲಿದೆ.
ಕಸ್ತೂರಿ ಅರಿಶಿನ ಪುಡಿ: ಹೆಣ್ಣುಮಕ್ಕಳ ಚರ್ಮಕ್ಕೆ ಕಸ್ತೂರಿ ಅರಿಶಿಣ ಸೂಕ್ತವಾಗಿ ಒಗ್ಗುತ್ತದೆ. ಹೆಣ್ಣುಮಕ್ಕಳಿಗೆ ಪ್ರಾಯದಲ್ಲಿ ಬರುವ ಮೊಡವೆ ಕಲೆಗಳ ನಿವಾರಣೆಗೆ ಬಳಸಬಹುದು. ಚರ್ಮಕ್ಕೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮೃದುತ್ವವನ್ನೂ ಹೆಚ್ಚಿಸುತ್ತದೆ.
ಕಡೆಲೆಹಿಟ್ಟು: ಇದು ಆಂಟಿ ಬ್ಯಾಕ್ಟಿರಿಯಲ್ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಹಾಗು ಇದರ ಲೇಪನದಿಂದ ಮೃದುವಾದ ಚರ್ಮ ಹೊಂದಬಹುದು.
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬಳಸಿ ಪೇಸ್ಟ್ ಮಾಡಿಕೊಳ್ಳಬೇಕು. ಚಿಕ್ಕ ಅರ್ಧ ಆಲುಗಡ್ಡೆಯನ್ನು ತುರಿದುಕೊಳ್ಳಬೇಕು. ಇದಕ್ಕೆ ಒಂದು ಚಮಚ ಕಸ್ತೂರಿ ಅರಿಶಿನ ಪುಡಿ ಹಾಗು ಒಂದುವರೆ ಚಮಚ ಕಡಲೆಹಿಟ್ಟನ್ನು ಸೇರಿಸಿಕೊಳ್ಳಬೇಕು. ಇದಕ್ಕೆ ನೀರಿನ ಅವಶ್ಯಕತೆ ಅಷ್ಟಾಗಿ ಇರುವುದಿಲ್ಲ. ಪೇಸ್ಟ್ ಗಟ್ಟಿ ಎನಿಸಿದರೆ ಮಾತ್ರ ಸ್ವಲ್ಪ ನೀರು ಅಥವಾ ರೋಸ್ ವಾಟರ್ ಸೇರಿಸಿಕೊಂಡರೂ ಪರವಾಗಿಲ್ಲ. ಈ ಪೇಸ್ಟ್ ಅನ್ನು ವಾರದಲ್ಲಿ ಮೂರು ಬಾರಿ ಅಂದರೆ ಒಂದು ದಿನ ಬಿಟ್ಟು ಮತ್ತೊಂದು ದಿನಕ್ಕೆ ಹಚ್ಚಿಕೊಳ್ಳಬೇಕು. ತೆಳುವಾದ ಲೇಪನ ಮಾಡಿಕೊಳ್ಳಬೇಕು. ದಿನವೂ ಹಚ್ಚುವುದು ಬೇಡ. ಹೀಗೆ ನಿರಂತವಾಗಿ ಈ ಎಲ್ಲಾ ಮಿಶ್ರಣಗಳ ಪೇಸ್ಟ್ ಹಚ್ಚಿದರೆ ಮುಖದ ಮೇಲಿನ ಭಂಗು ನಿಧಾನವಾಗಿ ಮಾಯವಾಗುತ್ತಾ ಹೋಗುತ್ತದೆ. ಅಂದಹಾಗೆ ಈ ಮಿಶ್ರಣದ ಪೇಸ್ಟ್ ಅನ್ನು ಸುಮಾರು 15ದಿನಕ್ಕೆ ಆಗುವಷ್ಟು ಮಾಡಿಕೊಂಡು ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಬಹುದು. ತುಂಬಾ ಹಳೆ ಸ್ಟಾಕ್ ಮಖಕದ ಚರ್ಮಕ್ಕೆ ಮಾರಕವಾಗಬಹುದು. ಆದಷ್ಟು ಫ್ರೆಶ್ ಆಗಿ ಪೇಸ್ಟ್ ಮಾಡಿಕೊಳ್ಳಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.