ಕೊಪ್ಪಳ : ದೇವಸ್ಥಾನ ಒಂದರಲ್ಲಿ ಏಕಾಏಕಿ ಕರಡಿ ಆಗಮಿಸಿದ್ದು ಈ ವೇಳೆ ವೃದ್ಧನ ಮೇಲೆ ಕರಡಿ ದಾಳಿ ನಡೆಸಿದೆ.ಆದರೆ ಗಾಯಾಳು ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ವೃದ್ಧ ಸಾವನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ್ ದಲ್ಲಿ ನಡೆದಿದೆ.
ಹೌದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚೆನ್ನಪ್ಪ ಮಡಿವಾಳರ್ (74) ಸಾವನ್ನಪ್ಪಿದ್ದಾರೆ.ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ್ ದಲ್ಲಿ ದಾಳಿ ನಡೆಸಿತ್ತು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ನುಗ್ಗಿದ್ದ ಕರಡಿಯನ್ನು ಸೆರೆ ಹಿಡಿದಿದ್ದರು.ದೇವಸ್ಥಾನದಲ್ಲಿ ದೀಪದ ಎಣ್ಣೆ ನೀರು ಕುಡಿಯಲು ಕರಡಿ ಬಂದಿತ್ತು ಎಂದು ಹೇಳಲಾಗುತ್ತಿತ್ತು.
ಇದನ್ನು ಗಮನಿಸಿ ಜನರು ಬಾಗಿಲು ಮುಚ್ಚಿದ್ದರು.ದೇವಸ್ಥಾನದ ಎಲ್ಲಾ ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕರಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇರಿಸಿದ್ದು ಕರಡಿ ಈ ವೇಳೆ ತಪ್ಪಿಸಿಕೊಂಡು ವೃದ್ಧ ಚೆನ್ನಪ್ಪ ಮಡಿವಾಳರ ಎನ್ನುವ ವೃದ್ಧನ ಮೇಲೆ ದಾಳಿ ಮಾಡಿತ್ತು.
ಈ ವೇಳೆ ಗಾಯಾಳು ಚೆನ್ನಪ್ಪ ಮಡಿವಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಸಲ್ಲಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ವಿರುದ್ಧ ಚೆನ್ನಪ್ಪ ಮಡಿವಾಳರ್ ಮೃತಪಟ್ಟಿದ್ದಾರೆ.ಅರಣ್ಯ ಇಲಾಖೆಯ ನಿರ್ಲಕ್ಷಕ್ಕೆ ವೃದ್ಧ ಬಲಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.