ಚೆನ್ನೈ: ತೆಂಕಶಿ ಜಿಲ್ಲೆಯಲ್ಲಿ ಕರಡಿ ದಾಳಿಯಿಂದ ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಸಾಲಾ ಪೊಟ್ಟಣಗಳನ್ನು ಹೊತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಶಿವಶೈಲಂನಿಂದ ಪೇಠನ್ಪಿಳ್ಳೈಗೆ ಅರಣ್ಯ ಪ್ರದೇಶದ ಮಧ್ಯೆ ತೆರಳುತ್ತಿದ್ದ ವೇಳೆ ಕರುತಿಲಿಂಗಪುರದ ವೈಗುಂಡಮಣಿ ಅವರ ಮೇಲೆ ಕರಡಿ ದಾಳಿ ನಡೆಸಿದೆ.
BIGG NEWS: ಮನೆ ಕಟ್ಟೋರಿಗೆ ಬಿಗ್ ಶಾಕ್: ಸಿಮೆಂಟ್ ಬೆಲೆ ರೂ.30 ಏರಿಕೆ ಸಂಭವ
ಇದ್ದಕ್ಕಿದ್ದಂತೆ ಪೊದೆಯಿಂದ ಜಿಗಿದ ಕರಡಿ, ಏಕಾಏಕಿ ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಅಲ್ಲದೇ ವ್ಯಕ್ತಿಯನ್ನು ಕೆಳಗೆ ಮಲಗಿಸಿಕೊಂಡು ಕಚ್ಚಲು ಪ್ರಾರಂಭಿಸಿದೆ.ಈ ವೇಳೆ ಅರಣ್ಯ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದ ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಿಸಲು ಕರಡಿ ಮೇಲೆ ಕಲ್ಲು ಎಸೆದಿದ್ದಾರೆ. ಹೀಗಾಗಿದ್ದರೂ ಕರಡಿ ಒಂದು ಚೂರು ಕೂಡ ಕದಲಲಿಲ್ಲ. ನಂತರ ಇನ್ನಷ್ಟು ಜನ ಸೇರುತ್ತಿದ್ದಂತೆಯೇ ಗಾಬರಿಗೊಂಡ ಕರಡಿ ಜನರ ಗುಂಪಿನ ಮಧ್ಯೆ ಓಡುತ್ತಾ ನಾಗೇಂದ್ರನ್ ಮತ್ತು ಸೈಲೇಂದ್ರ ಎಂಬ ಇಬ್ಬರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.