ಬೆಂಗಳೂರು : ರಾಜರ ಕಾಲದಲ್ಲೂ ನಾಣ್ಯ ಮತ್ತು ತೆರಿಗೆ ವಸೂಲಿ ಮಾಡ್ತಿದ್ರು. ರಾಜ್ಯ ನಡೆಸಲು ತೆರಿಗೆ ಬೇಕೇ ಬೇಕು. ರಾಜರು ಆಗಲಿ, ರಾಜ್ಯ ಮತ್ತು ಕೇಂದ್ರ ಆಗಲಿ ತೆರಿಗೆ ವಸೂಲಿ ಮಾಡಿಯೇ ಆಡಳಿತ ನಡೆಸುವುದು.ಇಂದಿಗೆ GST ಜಾರಿಗೆ ಬಂದು 7 ವರ್ಷ ಆಗಿದೆ. ತೆರಿಗೆ ಹೆಚ್ಚು ಶೇಖರಣೆ ಮಾಡಿದವರಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಅವರೆಲ್ಲರಿಗೂ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ದಿನಾಚರಣೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಂವಿಧಾನದ ಮೂಲಕ ರಾಜ್ಯ ಮತ್ತು ಕೇಂದ್ರ ತೆರಿಗೆ ಅಧಿಕಾರ ವಿಧಿಸುವ ಅಧಿಕಾರ ಪಡೆಯಿತು. ಈ ಸಂವಿಧಾನದಲ್ಲಿ ವಿವರವಾಗಿದೆ ರಾಜ್ಯ ಮತ್ತು ಕೇಂದ್ರ ಯಾವ ಯಾವುದರ ಮೇಲೆ ತೆರಿಗೆ ವಿಧಿಸಬೇಕು ಅಂತ ಇದೆ. ಕರ್ನಾಟಕ ಸರ್ಕಾರ GST ಬರುವುದಕ್ಕಿಂತ ಮುಂಚೆಯೂ ತೆರಿಗೆ ವಸೂಲಿ ಮಾಡ್ತಿದ್ರು. ಎರಡು ವಿಧ ಇದೆ.. ತೆರಿಗೆ ವಸೂಲಿಯಲ್ಲಿ ಪರೋಕ್ಷ ಮತ್ತು ನೇರ ಅಂತ ಇದೆ ಎಂದು ತಿಳಿಸಿದರು.
ನಾವು ಗ್ಯಾರಂಟಿ ಘೋಷಣೆ ಮಾಡಿದ್ವಿ. ಇದಕ್ಕೆ 56 ಸಾವಿರ ಕೋಟಿ ಬೇಕಾಗುತ್ತೆ. ತೆರಿಗೆ ಇಲ್ಲ ಅಂದ್ರೆ ಹೇಗೆ ಅದಕ್ಕೆ ಹಣ ಒದಗಿಸುವುದು. ಆರ್ಥಿಕ ಅಸಮಾನತೆ ನಮ್ಮ ರಾಜ್ಯದಲ್ಲಿ ಇದೆ. ಅಂತಹವರಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದೇವೆ. ಎಲ್ಲ ದೇಶದಗಳಲ್ಲೂ ಹಿಂದುಳಿದವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ. ಅದರಿಂದ ನಮ್ಮ ರಾಜ್ಯದಲ್ಲಿ ತೆರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು.
ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ನೋಂದಣಿದಾರರು ಇದ್ದಾರೆ. ತೆರಿಗೆ ಹೆಚ್ಚು ಶೇಖರಣೆ ಮಾಡಿದರೆ ಕರ್ನಾಟಕ ಅಭಿವೃದ್ಧಿ ಸಾಧ್ಯ.
ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ.2022-23ರಲ್ಲಿ 1 ಲಕ್ಷದ 22 ಸಾವಿರ 871 ಕೋಟಿ ತೆರಿಗೆ ಸಂಗ್ರಹ ಆಗಿದೆ. 65 ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾವೆ. ಬೇರೆಯವರು ಸಹ ಅವರಿಗಿಂತ ಹೆಚ್ಚಿಗೆ ತೆರಿಗೆ ಸಂಗ್ರಹ ಮಾಡಬೇಕು ಇಲಾಖೆಯ 6000 ಅಧಿಕಾರಿಗಳು ತೆರಿಗೆ ಸಂಗ್ರಹ ಮಾಡಬೇಕು ಎಲ್ಲ ಪ್ರಯತ್ನ ಕೂಡ ಮಾಡಬೇಕೆಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.