ಮಂಗಳೂರು: ಕೆಲಸಕ್ಕೆ ತೆರಳುತ್ತಿದ್ದಂತ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಬೀದಿಯಲ್ಲಿ ಆಡುತ್ತಿದ್ದಂತ ನಾಯಿಮರಿಯೊಂದು ಕಚ್ಚಿದೆ. ಇದನ್ನು ತಾತ್ಸಾರ ಮಾಡಿದ್ದಂತ ಮಹಿಳೆಯೊಬ್ಬರು ರೆಬೀಸ್ ರೋಗದಿಂದ ಸಾವನ್ನಪ್ಪಿರುವಂತ ಘಟನೆ ಸುಳ್ಯದಲ್ಲಿ ನಡೆದಿದೆ.
ಮಾರ್ಚ್.7ರಂದು ಸಂಪಾಜೆಯ ಕಲ್ಲುಗುಂಡಿ ಬಳಿಯಲ್ಲಿ ಅರಂತೋಡಿಗೆ ತೆರಳುತ್ತಿದ್ದಂತ 42 ವರ್ಷದ ಮಹಿಳೆಗೆ ಬೀದಿಯಲ್ಲಿದ್ದಂತ ನಾಯಿಮರಿಯೊಂದು ಕಚ್ಚಿದೆ. ಈ ಬಗ್ಗೆ ಯಾರಿಗೂ ಹೇಳದೇ, ಚಿಕಿತ್ಸೆಯನ್ನು ಪಡೆಯದೇ ಮಹಿಳೆ ತಾತ್ಸಾರ ಮಾಡಿದ್ದಾಳೆ.
ಮಾರ್ಚ್.17ರಂದು ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ವೇಳೆಯಲ್ಲಿ ನೀರು ನೋಡಿದ್ರೇ ಕಿರುಚಾಡೋದಕ್ಕೆ ಮಹಿಳೆ ಆರಂಭಿಸಿದ್ದಾರೆ. ವಿಚಿತ್ರವಾಗಿ ವರ್ತನೆ ತೋರಿದಂತ ಮಹಿಳೆಯನ್ನು ವಿಚಾರಿಸಿದಾಗ ನಾಯಿಮರಿ ಕಚ್ಚಿದಂತ ವಿಷಯವನ್ನು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೇ ಮಾರ್ಚ್.22ರಂದು ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ರೆಬೀಸ್ ತಗುಲಿದ್ದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಮಹಿಳೆ ವಾಸವಾಗಿದ್ದಂತ ಪ್ರದೇಶ ಮತ್ತು ಕುಟುಂಬದ ಹಲವಾರು ಜನರಿಗೆ ರೆಬೀಸ್ ವಿರೋಧಿ ಲಸಿಕೆಯನ್ನು ನೀಡಿದ್ದಾರೆ.
ಥಿಯೇಟರ್‌ನಲ್ಲಿ IPL ಪಂದ್ಯಗಳ ಪ್ರಸಾರಕ್ಕೆ BCCIನೊಂದಿಗೆ ಪಿವಿಆರ್ ಐನಾಕ್ಸ್ ಒಪ್ಪಂದ | PVR-INOX
ನಾಗ್ಪುರ ಹಿಂಸಾಚಾರ: ಮತ್ತೆ 14 ಮಂದಿ ಬಂಧನ, ಬಂಧಿತರ ಸಂಖ್ಯೆ 105ಕ್ಕೆ ಏರಿಕೆ, 3 ಹೊಸ FIR ದಾಖಲು | Nagpur violence