ಚಿಕ್ಕಬಳ್ಳಾಪುರ : ಆನ್ ಲೈನ್ ಆ್ಯಪ್ ಗಳಲ್ಲಿ ( ONLINE APP) ಲೋನ್ ಪಡೆಯುವ ಮುನ್ನ ಎಚ್ಚರವಾಗಿರಿ…ಇಲ್ಲೊಬ್ಬ ವ್ಯಕ್ತಿ ಸಾಲದ ಕಿರುಕುಳ ತಾಳಲಾರದೇ ಆತ್ಮಹತ್ಯೆ ಗೆ ಯತ್ನಿಸಿದ ಆಘಾಯತಕಾರಿ ಘಟನೆ ವರದಿಯಾಗಿದೆ.
ನಗರದ ಬಾಬಾಜಾನ್ ಎಂಬ ವ್ಯಕ್ತಿ ಕಾಯಿನ್ ಪಾರ್ಕ್, ಕ್ಯಾಷ್ ಲೆಂಟ್ ಆಪ್ , ಲೈವ್ ಇನ್ ಕ್ರೆಡಿಟ್, ಎಂಪೈರ್ ಕ್ರೆಡಿಟ್ ಆ್ಯಪ್ ಸೇರಿದಂತೆ ಒಟ್ಟು 7 ಆ್ಯಪ್ ನಲ್ಲಿ 30 ಸಾವಿರ ಸಾಲ ಪಡೆದಿದ್ದನು.
ನಂತರ ಸಾಲ ಮರು ಪಾವತಿ ಮಾಡಿದ್ರೂ ಕೂಡ ಖದೀಮರು ನೀವು ಮತ್ತೆ ಹಣ ಕಟ್ಟಬೇಕು , ಬಡ್ಡಿ ಕಟ್ಟಬೇಕು ಎಂದು ಎಚ್ಚರಿಕೆ ನೀಡಿದ್ದಾರೆ , ಹಾಗೂ ಬಾಬಾಜಾನ್ ಫೋಟೋವನ್ನ ಕೆಟ್ಟದಾಗಿ ಎಡಿಟ್ ಮಾಡಿದ್ದು, ಅಶ್ಲೀಲ ಬರಹಗಳನ್ನ ಬರೆದು ಬಾಬಾಜಾನ್ ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ಬಾಬಾಜಾನ್ ವಿಷ ಸೇವಿಸಿದ್ದಾರೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಬಾಜಾನ್ ಚೇತರಿಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
BIGG NEWS : ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ, ಹೂ ತೂಕ ಬಿಡುವಂತಿಲ್ಲ : ಹೈಕೋರ್ಟ್ ಆದೇಶ
BREAKING NEWS: ಮಣಿಪುರದಲ್ಲಿ 2 ಶಾಲಾ ಬಸ್ ಗಳ ನಡುವೆ ಢಿಕ್ಕಿ: 15 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ