ಅಮರಾವತಿ: ಅಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು. ಮೊಬೈಲ್ ಇಲ್ಲದ ಜೀವನನ್ನು ಊಹಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಿಲ್ಲ. ದಿನಸಿ ಅಂಗಡಿಗೆ ಹೋದರೂ, ಸಣ್ಣ ಮಳಿಗೆಯಲ್ಲಿ ಟೀ ಕುಡಿದರೂ ಹಣ ಪಾವತಿ ಮಾಡೋದಕ್ಕೂ ಮೊಬೈಲ್ ಹಿಡಿದುಕೊಳ್ಳುವಷ್ಟೂ ಅಡಿಕ್ಷನ್ಗೆ ಒಳಗಾಗಿದ್ದೇವೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ವಾಟ್ಸಾಪ್ನಲ್ಲಿ ಬಂದ ಸಂದೇಶಗಳನ್ನೆಲ್ಲಾ ಸ್ವೀಕರಿಸುತ್ತಾ 21 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.
ಅಪರಿಚಿತ ನಂಬರ್ನಿಂದ ಬಂದ ವಾಟ್ಸಾಪ್ ಮೆಸೇಜ್ನಿಂದ ಶಿಕ್ಷಿಯೊಬ್ಬರು 21 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈಲ್ಲಿನ ಅನ್ನಮಯ್ಯ ಜಿಲ್ಲೆಯ ನಿವಾಸಿಯಾಗಿರುವ ಶಿಕ್ಷಕಿ ವರಲಕ್ಷಿ ಅವರೇ 21 ಲಕ್ಷ ಕಳೆದುಕೊಂಡಿರುವವರು. ತನ್ನ ಮೊಬೈಲ್ಗೆ ಬಂದ ಒಂದೇ ಒಂದು ವಾಟ್ಸಾಪ್ ಲಿಂಕ್ ಸಂದೇಶದಿಂದ ಹಣ ಕಳೆದುಕೊಂಡು ಬಳಿಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಹಣ ಕಳೆದುಕೊಂಡಿದ್ದು ಹೇಗೆ?
ಅಪರಿಚಿತ ಮೊಬೈಲ್ ಸಂಖ್ಯೆಯಿಂದ ತನ್ನ ವಾಟ್ಸಾಪ್ಗೆ ಲಿಂಕ್ನೊಂದಿಗೆ ಮೆಸೇಜ್ ಬಂದಿದೆ. ಹಲವು ಬಾರಿ ಸಂದೇಶಗಳನ್ನು ಸ್ವೀಕರಿಸಿದ್ದಾರೆ, ಅಂದಿನಿಂದಲೇ ಆಕೆಯ ಫೋನ್ ಹ್ಯಾಕ್ ಆಗಿದೆ. ವರಲಕ್ಷ್ಮೀ ಅವರು ಲಿಂಕ್ ಕ್ಲಿಕ್ ಮಾಡಿದ ಬಳಿಕ ಫೋನ್ ಸಂಪೂರ್ಣ ಹ್ಯಾಕ್ ಆಗಿದ್ದು, ಸೈಬರ್ ಕಿರಾತಕರು ಈಕೆಯ ಖಾತೆಯಿಂದಲೇ ವಹಿವಾಟು ನಡೆಸಿದ್ದಾರೆ.
20,000, 40,000 ಮತ್ತು 80,000 ದಂತೆ ಖಾತೆಯಿಂದ ಹಣ ಕಡಿಗೊಳ್ಳುತ್ತಾ ಹೋಗಿದೆ. ಹೀಗೆ ಒಟ್ಟು 21 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. ಅಲ್ಲದೇ ಮದನಪಲ್ಲಿಯ ಉದ್ಯೋಗಿ ಜ್ಞಾನ ಪ್ರಕಾಶ್ ಅವರಿಂದಲೂ 12 ಲಕ್ಷ ರೂಪಾಯಿ ಸೈಬರ್ ಕಳ್ಳರ ಪಾಲಾಗಿದೆ