Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೆ ಭರ್ಜರಿ ತಯಾರಿ : ಇಲ್ಲಿನ ಆಚರಣೆಯ ವಿಶೇಷತೆ, ಇತಿಹಾಸ ಗೊತ್ತೇ? ಇಲ್ಲಿದೆ ಮಾಹಿತಿ

16/03/2026 10:13 AM

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

16/03/2026 10:05 AM

ಬಾಳೆ ಎಲೆಯಲ್ಲಿ ಊಟ: ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ ! 

16/03/2026 10:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘BDA’ ಭೂಮಿ ಡಿನೋಟಿಫೈ ಪ್ರಕರಣ : ಯಡಿಯೂರಪ್ಪ,ಕುಮಾರಸ್ವಾಮಿ ವಿರುದ್ಧ ಸಚಿವರಿಂದ ದಾಖಲೆ ಬಿಡುಗಡೆ
KARNATAKA

‘BDA’ ಭೂಮಿ ಡಿನೋಟಿಫೈ ಪ್ರಕರಣ : ಯಡಿಯೂರಪ್ಪ,ಕುಮಾರಸ್ವಾಮಿ ವಿರುದ್ಧ ಸಚಿವರಿಂದ ದಾಖಲೆ ಬಿಡುಗಡೆ

By kannadanewsnow0520/09/2024 12:14 PM

ಬೆಂಗಳೂರು : ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧದ ಮುಡಾ ನಿವೇಶನ ಹಗರಣದ ಸದ್ದು ಮುಂದುವರಿದಿರುವ ಬೆನ್ನಲ್ಲೇ ಮತ್ತೊಂದು ಕಡೆ ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧದ ಅಕ್ರಮ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಹೌದು ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದಂತಹ ಕೃಷ್ಣಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಬಿಡಿಎ ಭೂಮಿಯ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದು, ಪ್ರಕರಣ ಸಂಬಂಧ ಸುಮಾರು 9 ವರ್ಷಗಳ ಹಿಂದೆಯೇ ಎಫ್‌ಐಆರ್‌ ದಾಖಲಾಗಿದ್ದರೂ ಲೋಕಾಯುಕ್ತ ತನಿಖೆ ವಿಳಂಬವಾಗಿರುವ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮಠದಹಳ್ಳಿಯ ಗಂಗೇನಹಳ್ಳಿ ಬಡಾವಣೆಯಲ್ಲಿಬಿಡಿಎ ಜಮೀನು ಡಿನೋಟಿಫೈ ಕುರಿತಂತೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ವಿರುದ್ಧದ ಗಂಭೀರ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಲೋಕಾಯುಕ್ತರು ಶೀಘ್ರ ತನಿಖೆಯನ್ನು ಪೂರೈಸಿ ವರದಿ ನೀಡಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಹಿನ್ನೆಲೆ?

ಮಠದ ಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧಿನಗೊಂಡಿರುತ್ತದೆ. ಇದನ್ನು ಡಿನೋಟಿಫೈ ಮಾಡಬೇಕು ಅಂತ ಯಾರೋ ರಾಜಶೇಖರಯ್ಯ ಅನ್ನೋರು ಅರ್ಜಿ ಕೊಡ್ತಾರೆ. ದಾರಿಯಲ್ಲಿ ಹೋಗುವ ಯಾರೋ ದಾಸಯ್ಯ ಜಮೀನಿಗೆ ಸಂಬಂಧವೇ ಇಲ್ಲದ ರಾಜಶೇಖರಯ್ಯ ಅನ್ನುವವರ ಅರ್ಜಿ ಕೊಡ್ತಾರೆ. 22.08.2007 ರಲ್ಲಿ ಅರ್ಜಿ ಬಂದ ಅದೇ ದಿನ ಸಿಎಂ ಆಗಿದ್ದ ಎಚ್ಡಿಕೆ ಡಿನೋಟಿಫೈ ಮಾಡಲು ಸೂಚಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಅಂದಿನ ಕಾರ್ಯದರ್ಶಿಗಳಾದ ಜ್ಯೋತಿ ರಾಮಲಿಂಗಂ ಇದು ಡಿನೋಟಿಫೈಗೆ ಅರ್ಹವಲ್ಲಎಂದು ಷರಾ ಬರೆಯುತ್ತಾರೆ. ಅಧಿಕಾರಿಗಳ ಈ ಅಭಿಪ್ರಾಯವನ್ನು ಗಾಳಿಗೆ ತೂರಿದ ಯಡಿಯೂರಪ್ಪ, 2010 ಜೂನ್‌ 5ರಂದು ಭೂಸ್ವಾಧೀನದಿಂದ ಕೈ ಬಿಡುತ್ತಾರೆ. ಡಿನೋಟಿಫೈ ಆದ ಈ ಭೂಮಿ ನಂತರದ ಕೆಲವೇ ದಿನಗಳಲ್ಲಿಕುಮಾರಸ್ವಾಮಿ ಭಾಮೈದನ ಹೆಸರಿಗೆ ನೋಂದಣಿಯಾಗುತ್ತದೆ.

ಡಿ ನೋಟಿಫಿಕೇಷನ್ ಆದ ಒಂದೇ ತಿಂಗಳಿಗೆ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರಿಗೆ ಶುದ್ದ ಕ್ರಯಪತ್ರ ಆಗುತ್ತದೆ . ಹೀಗೆ ಅಕ್ರಮವಾಗಿ ಡಿನೋಟಿಫೈ ಆದ ಜಮೀನು ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದೆ. ಇದು ವ್ಯವಸ್ಥಿತ ವಂಚನೆ ಹೌದೋ ಅಲ್ವೋ? ಇದು ನೇರವಾಗಿ ಕುಮಾರಸ್ವಾಮಿ ಆದೇಶದಿಂದಲೇ ಆಗಿದೆ. ಕುಮಾರಸ್ವಾಮಿ ಪುಟಫ್ ಮಾಡಿದ ಫೈಲ್ ಗೆ ಯಡಿಯೂರಪ್ಪ ಸಹಿ ಮಾಡಿದ್ದಾರೆ. ಸಾರ್ವಜನಿಕ ಸ್ವತ್ತನ್ನು ತಂತ್ರಗಾರಿಕೆ ಮಾಡಿ ಲೂಟಿ ಮಾಡಿದ್ದೀರ ಕುಮಾರಸ್ವಾಮಿಯವರೇ ಎಂದು ಆರೋಪಿಸಿದರು.

ಇನ್ನು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇದು ಹಳೆಯ ಕೇಸ್ ಅಲ್ಲ, ಹಾಲಿ ಪ್ರಕರಣ. ನಾವೇನೋ ಸೃಷ್ಟಿ ಮಾಡಿ ಹುಡುಕಾಡಿ ದಾಖಲೆ ಮಾಡಿಲ್ಲ. ಯಡಿಯೂರಪ್ಪಗೆ ಹೈಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ನಿಮ್ಮ ಬಾಮೈದಗೆ ಹೇಗೆ ಜಮೀನು ಸಿಕ್ತು ಅದಕ್ಕೆ ಕುಮಾರಸ್ವಾಮಿ ಉತ್ತರ ನೀಡಬೇಕು. 60 ಲಕ್ಷಕ್ಕೆ ಹೇಗೆ ಕುಮಾರಸ್ವಾಮಿ ಅತ್ತೆ ಜಮೀನು ಖರೀದಿ ಮಾಡಿದ್ರಿ? ಜಮೀನು ನಿಮ್ಮ ಬಾಮೈದನ ಹೆಸರಲ್ಲಿ ಇದೆ ಹೇಗೆ? ಎಂದು ಪ್ರಶ್ನಿಸಿದರು.

Share. Facebook Twitter LinkedIn WhatsApp Email

Related Posts

ಉತ್ತರ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೆ ಭರ್ಜರಿ ತಯಾರಿ : ಇಲ್ಲಿನ ಆಚರಣೆಯ ವಿಶೇಷತೆ, ಇತಿಹಾಸ ಗೊತ್ತೇ? ಇಲ್ಲಿದೆ ಮಾಹಿತಿ

16/03/2026 10:13 AM2 Mins Read

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

16/03/2026 10:05 AM2 Mins Read

ಬಾಳೆ ಎಲೆಯಲ್ಲಿ ಊಟ: ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ ! 

16/03/2026 10:00 AM2 Mins Read
Recent News

ಉತ್ತರ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೆ ಭರ್ಜರಿ ತಯಾರಿ : ಇಲ್ಲಿನ ಆಚರಣೆಯ ವಿಶೇಷತೆ, ಇತಿಹಾಸ ಗೊತ್ತೇ? ಇಲ್ಲಿದೆ ಮಾಹಿತಿ

16/03/2026 10:13 AM

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

16/03/2026 10:05 AM

ಬಾಳೆ ಎಲೆಯಲ್ಲಿ ಊಟ: ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ ! 

16/03/2026 10:00 AM

BREAKING : ಬ್ಯಾಲೆಟ್ ಪೇಪರ್ ನಲ್ಲೂ ಅಕ್ರಮ : ಕಾಂಗ್ರೆಸ್ ಅಭ್ಯರ್ಥಿ ಪರ ಅಕ್ರಮವಾಗಿ ಮತ ಹಾಕಿದ ಚುನಾವಣಾಧಿಕಾರಿ!

16/03/2026 10:00 AM
State News
KARNATAKA

ಉತ್ತರ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೆ ಭರ್ಜರಿ ತಯಾರಿ : ಇಲ್ಲಿನ ಆಚರಣೆಯ ವಿಶೇಷತೆ, ಇತಿಹಾಸ ಗೊತ್ತೇ? ಇಲ್ಲಿದೆ ಮಾಹಿತಿ

By kannadanewsnow0516/03/2026 10:13 AM KARNATAKA 2 Mins Read

ಕರ್ನಾಟಕದ ಜನಪದ ಸಂಸ್ಕೃತಿಯ ತವರು ಉತ್ತರ ಕರ್ನಾಟಕದಲ್ಲಿ ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಅದು ಬದುಕಿನ ಹೊಸ ಪಯಣದ ಆರಂಭ.…

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

16/03/2026 10:05 AM

ಬಾಳೆ ಎಲೆಯಲ್ಲಿ ಊಟ: ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ ! 

16/03/2026 10:00 AM

BREAKING : ಬ್ಯಾಲೆಟ್ ಪೇಪರ್ ನಲ್ಲೂ ಅಕ್ರಮ : ಕಾಂಗ್ರೆಸ್ ಅಭ್ಯರ್ಥಿ ಪರ ಅಕ್ರಮವಾಗಿ ಮತ ಹಾಕಿದ ಚುನಾವಣಾಧಿಕಾರಿ!

16/03/2026 10:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.