ಬೆಂಗಳೂರು : ಕೊರೊನಾ ನಂತರ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಕಲಿಕೆ ಸಾಮರ್ಥ್ಯ ಹೆಚ್ಚಿಸಲು 5 ಹಾಗೂ 8 ನೇ ತರಗತಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು 10 ನೇ ತರಗತಿಯಲ್ಲಿ ಮಕ್ಕಳು ಪಬ್ಲಿಕ್ ಪರೀಕ್ಷೆ ಎದುರಿಸುತ್ತಾರೆ, ಎಸ್ ಎಸ್ ಎಲ್ ಸಿ ಹಂತಕ್ಕೆ ಹೋಗುವ ಮೊದಲೇ ಮಕ್ಕಳ ಕಲಿಕಾ ಮಟ್ಟ ಮೌಲ್ಯ ಮಾಪನ ಮಾಡುವುದು ಒಳ್ಳೆಯದು, 5 ಹಾಗೂ 8 ನೇ ತರಗತಿ ಮಕ್ಕಳಿಗೆ ಮೌಲ್ಯಮಾಪನ ಟೆಸ್ಟ್ ನಡೆಸಲಾಗುತ್ತದೆ. ಯಾರನ್ನು ಕೂಡ ಫೇಲ್ ಮಾಡುವುದಿಲ್ಲ, ಇದು ಸಾಮಾನ್ಯ ಪರೀಕ್ಷೆಯಾಗಿರುತ್ತದೆ, ಪಬ್ಲಿಕ್ ಅಲ್ಲ ಎಂದರು.
ಮೌಲ್ಯಮಾಪನದಲ್ಲಿ ವಿದ್ಯಾರ್ಥಿ ಕಲಿಕೆ ಹಿಂದುಳಿದಿರುವುದು ಕಂಡು ಬಂದರೆ ಅಂತವರಿಗೆ ಮತ್ತೆ ಪರೀಕ್ಷೆ ಬರೆಸಲಾಗುತ್ತದೆ. ಈ ಮೂಲಕ ಮಕ್ಕಳ ಕಲಿಕಾ ಮಟ್ಟ ಸುಧಾರಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಮಕ್ಕಳು ಭಯ ಪಡುವ ಅಗತ್ಯವಿಲ್ಲ ಇದು ಸಾಮಾನ್ಯ ಪರೀಕ್ಷೆಯಾಗಿರುತ್ತದೆ, ಪಬ್ಲಿಕ್ ಅಲ್ಲ ಎಂದರು.
ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಸಚಿವ ಬಿ.ಸಿ ನಾಗೇಶ್ ಮುಖ್ಯ ಮಾಹಿತಿ
ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಸಚಿವ ಬಿ.ಸಿ ನಾಗೇಶ್ ಮುಖ್ಯ ಮಾಹಿತಿ ನೀಡಿದ್ದು, ಒಂದನೇ ತರಗತಿಗೆ ಮಗು ಸೇರಿಸಲು ಆರು ವರ್ಷ ಪೂರ್ಣಗೊಂಡಿರಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದನೇ ತರಗತಿಗೆ ಶಾಲೆಗೆ ಸೇರಿವುದಕ್ಕೆ ಮಗುವಿಗೆ 6 ವರ್ಷ ಪೂರ್ಣವಾಗುವುದು ಕಡ್ಡಾಯವಾಗಿದೆ . ಈ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತದೆ ಎಂದರು. ಈಗಾಗಲೇ ಇತರ 23 ರಾಜ್ಯಗಳಲ್ಲಿ ಈ ನಿಯಮ ಜಾರಿಗೆ ತರಲಾಗಿದ್ದು, ಕರ್ನಾಟಕದಲ್ಲಿ ಕೂಡ ಬರುವ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸಲು 6 ವರ್ಷ ಕಡ್ಡಾಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
BIGG NEWS : ‘CET’ ಅಭ್ಯರ್ಥಿಗಳೇ ಗಮನಿಸಿ : ಇಂದಿನಿಂದ ಕೋರ್ಸ್ ಆಯ್ಕೆಗೆ ಅವಕಾಶ