ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳ ಮಾಹಿತಿಗಳನ್ನು ಕಡ್ಡಾಯವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕಾಗಿದೆ ಎಂಬುದಾಗಿ ಬಿಬಿಎಂಪಿ ಡೆಡ್ ಲೈನ್ ಫಿಕ್ಸ್ ಮಾಡಿದೆ.
ಈ ನಿಟ್ಟಿನಲ್ಲಿ ಪಾಲಿಕೆಯು ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಪೋರ್ಟಲ್‌ನಲ್ಲಿ https://bbmp.oasisweb.in/TankerManagement/SelfRegistration.aspx ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ದಿನಾಂಕ: 01-03-2024 ರಿಂದ 07-03-2024 ರವರೆಗೆ ತಮ್ಮ ಹೆಸರು, ವಿಳಾಸ, ವಲಯ, ಪಿನ್ ಕೋಡ್, ಮೊಬೈಲ್ ಸಂಖ್ಯೆ, ಟ್ಯಾಂಕರ್ ವಾಹನದ ಸಂಖ್ಯೆ, ಬ್ಯಾಂಕರ್ ಸಾಮರ್ಥ್ಯ, ಚಾಲಕನ ಹೆಸರು, ಚಾಲಕನ ಡ್ರೈವಿಂಗ್ ಲೈಸನ್ಸ್ ಮಾಹಿತಿಗಳನ್ನು ದಾಖಲಿಸಿ ಮೇಲ್ಕಂಡ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ.
ಸದರಿ ಪೋರ್ಟಲ್ ಮೂಲಕ ಪಡೆಯಲಾಗಿರುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ವಾಹನ ಚಾಲಕರೊಂದಿಗೆ ಇರತಕ್ಕದ್ದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಲ್ಕರ್ ವಿಕಾಸ್ ಕಿಶೋರ್ ರವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊನ್ನೆ ‘ಪಾಕ್ ಪರ’ ಘೋಷಣೆ, ಇಂದು ‘ಬಾಂಬ್ ಸ್ಪೋಟ’: ‘ಗೃಹ ಸಚಿವ’ರ ರಾಜೀನಾಮೆಗೆ ‘ಯತ್ನಾಳ್’ ಆಗ್ರಹ
ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ