ಬೆಂಗಳೂರು: ನಕಲಿ ಪೊಲೀಸ್ ವೆರಿಫಿಕೇಷನ್ ಕೊಟ್ಟಿದ್ದಂತ ’ಗುತ್ತಿಗೆದಾರರನ್ನು ಪಾಲಿಕೆಯ ಯಾವುದೇ ಟೆಂಡರ್ ಗಳಲ್ಲಿ ಭಾಗವಹಿಸದಂತೆ 03 ವರ್ಷಗಳ ಅವಧಿಗೆ ಡಿಬಾರ್ ಮಾಡಿ ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ನಕಲಿ ಸರ್ಟಿಫಿಕೇಟ್ ಕೊಟ್ಟಂತ ಗುತ್ತಿಗೆದಾರನಿಗೆ ಬಿಗ್ ಶಾಕ್ ನೀಡಲಾಗಿದೆ.
ಈ ಕುರಿತಂತೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಯ ಮಾಲೀಕರಾದ ಎ.ವಿ.ಗಿರೀಶ್ ಗುತ್ತಿಗೆದಾರರು ಸರ್ಕಾರದ ಒಳಾಡಳಿತ ಇಲಾಖೆಗೆ ನಕಲಿ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಅನ್ನು ನೀಡಿ ಪ್ರಸಾರ ಪರವಾನಗಿಯನ್ನು ಪಡೆದುಕೊಂಡಿರುವುದು ಹಾಗೆಯೇ ಸದರಿ ಪ್ರಸಾರ ಪರವಾನಗಿಯನನ್ಉ ಉಪಯೋಗಿಸಿಕೊಂಡು ಪಾಲಿಕೆಯ ಹಲವು ಟೆಂಡರ್ಗಳಲ್ಲಿ ಪಾಲ್ಗೊಂಡು ಕಾರ್ಯಾದೇಶಗಳು ಮತ್ತು ಬಿಲ್ಲುಗಳನ್ನು ಪಡೆದುಕೊಂಡಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ ಎಂದಿದೆ.
ಮುಂದುವರೆದು, ಪ್ರಸಾರ ಪರವಾನಗಿ ಪಡೆಯಲು ಸಲ್ಲಿಸಿರುವ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ನಕಲಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರವರ ವರದಿಯಂತೆ ದಿನಾಂಕ:15-06-2024ರಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಪ್ರಸಾರ ಪರವಾನಗಿಯನ್ನು ರದ್ದುಗೊಳಿಸಿ ಆದೇಶಿಸಿದೆ.
ಮೇಲ್ಕಂಡ ಕಾರಣಗಳಿಂದ ಪಾಲಿಕೆಯ ದಕ್ಷಿಣ ಮತ್ತು ಪಶ್ಚಿಮ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರುಗಳು ಎ.ವಿ.ಗಿರಿಶ್, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆ ರವರಿಗೆ ಕಾಮಗಾರಿ ನಿರ್ವಹಿಸಲು ನೀಡಲಾಗಿದ್ದ ಕಾರ್ಯಾದೇಶಗಳನ್ನು ರದ್ದುಗೊಳಿಸಿ ಆದೇಶಿಸಿದೆ.
ಆದಕಾರಣ ದಿನಾಂಕ:30-07-2024ರಿಂದ ಜಾರಿಗೆ ಬರುವಂತೆ 03 (ಮೂರು) ವರ್ಷಗಳ ಅವಧಿಗೆ ಎ.ವಿ.ಗಿರೀಶ್, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಯ (ನಂ.294, 1ನೇ ಮೈನ್, 1ನೇ ಕ್ರಾಸ್, 11ನೇ ಬ್ಲಾಕ್, ನಾಗರಭಾವಿ, 2ನೇ ಹಂತ, ಬೆಂಗಳೂರು-560 072) ಗುತ್ತಿಗೆದಾರರನ್ನು ಡಿಬಾರ್ ಮಾಡಿ ಆದೇಶಿಸಲಾಗಿದೆ.
BREAKING: ನೂತನ ಜಾಹೀರಾತು ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ‘ರಮೇಶ್ ಬಾಬು’ ನೇಮಕ: ಸಿಎಂ ಸಿದ್ಧರಾಮಯ್ಯ ಆದೇಶ
BIG UPDATE : ಯಜಮಾನಿಯರಿಗೆ ಗುಡ್ ನ್ಯೂಸ್ : ಕೊನೆಗೂ 1 ತಿಂಗಳ ‘ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ!