ಬೆಂಗಳೂರು: ನಗರದಲ್ಲಿ ವಾಣಿಜ್ಯ ಕಟ್ಟಡದ ತೆರಿಗೆ ಮೊತ್ತ ಕಡಿಮೆ ಮಾಡೋ ಸಂಬಂಧ ಮಾಲೀಕರಿಂದ 4.50 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಇಬ್ಬರು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನ ಬಿಬಿಎಂಪಿಯ ಎಆರ್ ಓ ರಾಜೇಂದ್ರ ಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಎಂಬುವರೇ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಂತ ಅಧಿಕಾರಿಗಳಾಗಿದ್ದಾರೆ.
ಈ ಇಬ್ಬರು ಅಧಿಕಾರಿಗಳು ವಾಣಿಜ್ಯ ಕಟ್ಟಡವೊಂದರ ತೆರಿಗೆ ಕಡಿಮೆ ಮಾಡುವ ಸಂಬಂಧ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮೊದಲ ಕಂತಿನಲ್ಲಿ 4.50 ಲಕ್ಷ ಹಣ ಪಡೆಯುತ್ತಿದ್ದಾಗ ಲಂಚದ ಹಣ ಸಹಿತ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.
ಈ ಸಂಬಂಧ ಬಿಬಿಎಂಪಿಯ ಎ ಆರ್ ಓ ರಾಜೇಂದ್ರ ಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಅವರನ್ನು ಬಂಧಿಸಿರುವಂತ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ‘CBI ಮುಕ್ತ ಅನುಮತಿ ಅಧಿಸೂಚನೆ’ ವಾಪಾಸ್ಸಿಗೆ ಮಹತ್ವದ ನಿರ್ಧಾರ