ಬೆಂಗಳೂರು : ಬೆಂಗಳೂರಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರಿಗೆ ಇದೀಗ ಬಿಬಿಎಂಪಿ ದಂಡ ವಿಧಿಸಿದೆ. 2 ಕಂಪನಿಗಳಿಗೆ ಕಾಮಗಾರಿ ಆರಂಭಿಸಲು ವಿಳಂಬ ಮಾಡಿದಕ್ಕೆ ಜೆಎಂಸಿ ಹಾಗು ಒಯಾಸಿನ್ ಕಂಪನಿಗಳಿಗೆ ತಲಾ 5 ಲಕ್ಷ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬರುವ WOC ರೋಡ್, ಹೊಸಕೆರೆಹಳ್ಳಿ ಕಾಮಗಾರಿ ಶುರುವಾಗದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ದಂಡ ವಿಧಿಸಿದೆ. ಅಲ್ಲದೆ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಬಿಬಿಎಂಪಿ ಎಚ್ಚರಿಕೆ ನೀಡಿದೆ.