ಬೆಂಗಳೂರು: ಸತತವಾಗಿ ನಾಲ್ಕು ದಿನಗಳಿಂದ ಕಾರ್ಯಾಚರಣೆ ಬಿಬಿಎಂಪಿ ನಡೆಯುತ್ತಿತ್ತು. ಇದೀಗ ಇದ್ದಕ್ಕಿದ್ದಂತೆ ಬೆಂಗಳೂರು ಮಹಾನಗರ ಪಾಲಿಕೆ ತಣ್ಣಗಾಗಿದೆ. ಕಳೆದ ವಾರ ಲ್ಲಿ ಸುರಿದ ಮಳೆಯಿಂದ ನೀರು ಹರಿಯಲು ರಾಜಕಾಲುವೆ ಒತ್ತುವರಿ ಮುಖ್ಯ ಕಾರಣ ಎಂದು ಗುರುತಿಸಲಾಗಿತ್ತು.
BIGG NEWS: ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು: ನಿರ್ದೇಶಕ ಡಾ. ಗಂಗಾಧರ್ ಗೌಡ ಸ್ಪಷ್ಟನೆ
ಅದೇ ಕಾರಣಕ್ಕೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ಗುರುತಿಸಿ, ನೀರಿನ ಸಹಜ ಹರಿವಿಗೆ ಇರುವ ತಡೆಗಳನ್ನು ನಿವಾರಿಸಲು ಮುಂದಾಗಿತ್ತು. ಹೀಗಾಗಿ ಪ್ರತಿಷ್ಠಿತ ಎಪ್ಸಿಲಾನ್ ಮತ್ತು ದಿವ್ಯಶ್ರೀ ವಿಲ್ಲಾಗಳಿಂದಲೂ ಒತ್ತುವರಿಯಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಆದರೆ ಇದೀಗ ಇದ್ದಕ್ಕಿಂತೆ ಒತ್ತುವರಿ ಅಧಿಕಾರಿಗಳು ಮತ್ತೊಂದು ಸ್ಪಷ್ಟನೆ ನೀಡಿದ್ದು, ಎಪ್ಸಿಲಾನ್ ಮತ್ತು ದಿವ್ಯಶ್ರೀ ವಿಲ್ಲಾಗಳಿಂದ ಒತ್ತುವರಿಯಾಗಿಲ್ಲ ಎಂದು ಹೇಳಿದ್ದಾರೆ. ಇದರಿಂದ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
BIGG NEWS: ವಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು: ನಿರ್ದೇಶಕ ಡಾ. ಗಂಗಾಧರ್ ಗೌಡ ಸ್ಪಷ್ಟನೆ
ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡುವುದಕ್ಕೆ ಮಾರ್ಕ್ ಕೂಡ ಮಾಡಿದ್ದರು. ಆದರೆ ಆ ಜಾಗವನ್ನು ಬಿಟ್ಟು ಅಧಿಕಾರಿಗಳು ಬೇರೆ ಕಡೆ ಮಾರ್ಕಿಂಗ್ ಮಾಡಿದ್ದರು. ಹೀಗಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದ. ಇದರಿಂದ ಎಚ್ಚೆತ್ತ ಪಾಲಿಕೆ ಮತ್ತೆ ಅಧಿಕಾರಿಗಳನ್ನ ಕರೆಸಿ ಮ್ಯಾಪ್ ಪರಿಶೀಲನೆ ನಡೆಸುತ್ತಿದ್ದರು.