ಬೆಂಗಳೂರು: ಬಿಬಿಎಂಪಿಯ 2024-25ನೇ ಸಾಲಿನ ಅಯವ್ಯಯವನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲಕೇರಿ ಅವರು ಫೆಬ್ರವರಿ.29ರ ಗುರುವಾರ ಮಂಡಿಸಲಿದ್ದಾರೆ. ಈ ಸಲ ಅಂದಾಜು 11,500 ಕೋಟಿ ರೂ.ಗಾತ್ರದ ಬಜೆಟ್ ಮಂಡಿಸೋ ಸಾಧ್ಯತೆ ಇದೆ.
ಬಿಬಿಎಂಪಿಯು ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ನಲ್ಲಿ 8050 ಕೋಟಿ ರೂ ಅನುದಾನ ಒದಗಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೇ ಸರ್ಕಾರ ನಿರೀಕ್ಷಿತ ಅನುದಾನ ನೀಡಿಲ್ಲ. ಹೀಗಾಗಿ ಸ್ವಂತ ಸಂಪನ್ಮೂಲವನ್ನೇ ನೆಚ್ಚಿಕೊಂಡು ಫೆ.29ರಂದು ಅಯವ್ಯಯ ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
2024-25ರಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ಮೂಲಕ 6 ಸಾವಿರ ಕೋಟಿ ತೆರಿಗೆ ಆದಾಯ ಸಂಗ್ರಹದ ನಿರೀಕ್ಷೆ ಇಟ್ಟುಕೊಂಡಿದೆ. ಒಂದು ಬಾರಿ ತೀರುವಳಿ ವ್ಯವಸ್ಥೆ ಜಾರಿಗೆ ತಂದಿದ್ದು, ಇದರಿಂದ ಹೆಚ್ಚುವರಿ ವರಮಾನ ಬರಬಹುದೆಂದು ಅಂದಾಜಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಿಂದ ಸ್ವತ್ತುಗಳ ಮಾರ್ಗಸೂಚಿ ದರದನ್ವಯ ತೆರಿಗೆ ವಿಧಿಸುವ ಪದ್ಧತಿಯನ್ನು ಅನುಷ್ಠಆನಗೊಳಿಸಲಾಗುತ್ತಿದ್ದು, ಅಧಿಕ ಆದಾಯ ನಿರೀಕ್ಷೆ ಮಾಡಲಾಗಿದೆ. ಇದಲ್ಲದೇ ಪರಿಷ್ಕೃತ ಜಾಹೀರಾತು ನೀತಿ ಹಾಗೂ ಪ್ರೀಮಿಯಂ ಎಫ್ಎಆರ್ ಮಾರಾಟದಿಂದ ಹೆಚ್ಚುವರಿಯಾಗಿ 2 ಸಾವಿರ ಕೋಟಿ ರೂ ತೆರಿಗೆಯೇತರ ಸಂಪನ್ಮೂಲ ಸಂಗ್ರಹದ ಗುರಿಯನ್ನು ಹೊಂದಲಾಗಿದೆ.
KAS Jobs: ‘384 ಕೆಎಎಸ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ: ‘3 ವರ್ಷ’ ವಯೋಮಿತಿ ಸಡಿಲಿಕೆ